‘ಗಲ್ಫ್ ಗಯ್ಸ್’ನಿಂದ ಸಹಾಯಧನ ವಿತರಣೆ

ಮಂಗಳೂರು, ಫೆ.4: ಗಲ್ಫ್ ಗಯ್ಸ್ ಕಮಿಟಿ, ಮಲ್ಲೂರು ಇದರ ವತಿಯಿಂದ ಯತೀಂ ಯುವತಿಯೊಬ್ಬಳ ವಿವಾಹಕ್ಕೆ ಹಾಗೂ ಬಡ ರೋಗಿಯೊಬ್ಬರ ಚಿಕಿತ್ಸೆಗೆ ಧನಸಹಾಯ ಮಾಡಲಾಯಿತು.
ಮಲ್ಲೂರು ಬದ್ರಿಯಾ ನಗರ ನಿವಾಸಿ ದಿವಂಗತ ತೌಫೀಕ್ ಎಂಬವರ ಪುತ್ರಿ ಶಮ್ಸೀನಾ ರ ಮದುವೆಗೆ 1,00,111 ರೂ.ನ ಚೆಕ್ ಅನ್ನು ಫಲಾನುಭವಿಯ ಸಂಬಂಧಿಕರಾದ ಅನ್ಸಾರ್ ಅವರ ಹಸ್ತಾಂತರಿಸಲಾಯಿತು.
ಈ ಸಂದರ್ಭ ಗಲ್ಫ್ ಗಯ್ಸ್ ಕಮಿಟಿಯ ಉಸ್ತುವಾರಿ ಸದಸ್ಯರಾದ ಸತ್ತಾರ್ ಮಲ್ಲೂರ್, ಮಜೀದ್ ಮಲ್ಲೂರ್, ಅಲ್ತಾಫ್ ದೆಮ್ಮಲೆ, ಅಬ್ದುಲ್ಲಾ ಬೊಳ್ಳಂಕಿನಿ, ಉಸ್ಮಾನ್ ಬದ್ರಿಯಾ ನಗರ, ಸುಹೈಲ್ ಉದ್ದಬೆಟ್ಟು ಹಾಗೂ ಸ್ಥಳೀಯ ಮಸೀದಿ ಖತೀಬ್ ಉಸ್ತಾದ್ ಉಪಸ್ಥಿತರಿದ್ದರು.
ಹೃದ್ರೋಗದಿಂದ ಬಳಲುತ್ತಿರುವ ಇಬ್ರಾಹೀಂ ಅಂಗಡಿಯವರ ಚಿಕಿತ್ಸೆಗಾಗಿ ಗಲ್ಫ್ ಗಯ್ಸ್ ವತಿಯಿಂದ 50,555 ರೂ. ಸಹಾಯಧನದ ಚೆಕ್ಕನ್ನು ವಿತರಿಸಲಾಯಿತು.
ಈ ಸಂದರ್ಭ ಕಮಿಟಿಯ ಉಸ್ತುವಾರಿ ಸದಸ್ಯರಾದ ಅಬ್ದುಲ್ಲಾ ಬೊಳ್ಳಂಕಿನಿ, ಅಲ್ತಾಫ್ ದೆಮ್ಮಲೆ, ಮಜೀದ್ ಮಲ್ಲೂರ್, ಸತ್ತಾರ್ ಮಲ್ಲೂರು, ಉಸ್ಮಾನ್ ಬದ್ರಿಯಾ ನಗರ ಹಾಗೂ ಹಿರಿಯರಾದ ಎಂ.ಜಿ.ಅಬ್ದುಲ್ ರಝಾಕ್ ಹಾಗೂ ದೆಮ್ಮಲೆ ಮಸೀದಿಯ ಖತೀಬ್ ಸಲೀಂ ಅರ್ಶದಿ ಉಪಸ್ಥಿತರಿದ್ದರು.







