ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿ ಮಹಾಸಭೆ
ಮಂಗಳೂರು, ಫೆ. 4: ಜೆಪ್ಪುವಿನ ಮುಹಿಯುದ್ದೀನ್ ಜುಮಾ ಮಸೀದಿ, ದರ್ಸ್ ಹಾಗೂ ನೂರುಲ್ ಇಸ್ಲಾಂ ಮದ್ರಸ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದರ್ಸ್ ವಿದ್ಯಾರ್ಥಿ ಹಾಫಿಝ್ ಉವೈಸ್ ಖಿರಾಅತ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಖತೀಬ್ ಹಾಗೂ ಮುದರ್ರಿಸ್ ಎ.ಮುಹಮ್ಮದ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜೆ.ಮುಹಮ್ಮದ್ ಅಶ್ರಫ್ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್, ಉಪಾಧ್ಯಕ್ಷರಾಗಿ ಜೆ.ಎಂ.ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಕೆ.ಎ.ರಝಾಕ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಜೆ.ಅಬ್ದುಲ್ ಹಮೀದ್, ಕೋಶಾಧಿಕಾರಿಯಾಗಿ ಎ.ಕೆ.ಅಬ್ದುಲ್ ಖಾದರ್, ಮದ್ರಸ ಉಸ್ತುವಾರಿಯಾಗಿ ಎ.ಅಬ್ದುಲ್ ಖಾದರ್, ಕ್ಯಾಂಟೀನ್ ಉಸ್ತುವಾರಿಯಾಗಿ ಮುಹಮ್ಮದ್ ನವಾಝ್ ಹಾಗೂ ಸದಸ್ಯರನ್ನಾಗಿ ಮುಹಮ್ಮದ್ ಬಶೀರ್, ಮುಝಮ್ಮಿಲ್ ಹುಸೈನ್, ಜೆ.ಹಸನ್, ಅಲ್ತಾಫ್ ಮೈನಾ ಅವರನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಅಶ್ರಫ್ ವಂದಿಸಿದರು.





