ನಿಷೇಧಿತ ದೇಶಗಳ ಪ್ರಯಾಣಿಕರಿಗೆ ಸ್ವಾಗತ: ಏರ್ ಫ್ರಾನ್ಸ್

ಪ್ಯಾರಿಸ್, ಫೆ. 4: ಅಮೆರಿಕದ ಫೆಡರಲ್ ನ್ಯಾಯಾಲಯವೊಂದು ಟ್ರಂಪ್‌ರ ವಲಸೆ ನಿಷೇಧ ಆದೇಶಕ್ಕೆ ತಡೆಯಾಜ್ಞೆ ವಿಧಿಸಿರುವಂತೆಯೇ, ಅಮೆರಿಕಕ್ಕೆ ಹೋಗುವ ತನ್ನ ವಿಮಾನಗಳಿಗೆ ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ತೊಂದರೆಗೊಳಗಾದ ಪ್ರಯಾಣಿಕರನ್ನು ಸೇರಿಸಿಕೊಳ್ಳುವುದಾಗಿ ಏರ್ ಫ್ರಾನ್ಸ್ ಶನಿವಾರ ಹೇಳಿದೆ.
ಕತಾರ್ ಏರ್‌ವೇಸ್‌ನಿಂದಲೂ ಭರವಸೆ
ನಿಷೇಧಕ್ಕೊಳಗಾಗಿರುವ ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರಯಾಣಿಕರಿಗೆ ತನ್ನ ವಿಮಾನಗಳಲ್ಲಿ ಅಮೆರಿಕಕ್ಕೆ ಪ್ರಯಾಣಿಸಲು ಇನ್ನು ಅವಕಾಶ ನೀಡಲಾಗುವುದು ಎಂದು ಕತಾರ್ ಏರ್‌ವೇಸ್ ಶನಿವಾರ ಹೇಳಿದೆ.
Next Story





