ಫೆ.8ರಂದು ‘ತೆಜೋ ದಿಯಾ’ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು, ಫೆ.4: ಜಿಟಿ ಫೌಂಡೇಶನ್ ವತಿಯಿಂದ ‘ತೆಜೋ ದಿಯಾ’ ಸಾಂಸ್ಕೃತಿಕ ಕಾರ್ಯಕ್ರಮವು ಫೆ.8ರಂದು ಸಂಜೆ 5ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಶ್ರೀನಿವಾಸ ತಿಳಿಸಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಗಳಾಗಿ ಚೆನ್ನೈನ ನೃತ್ಯೋದಯ ಸಂಸ್ಥೆಯ ನಿರ್ದೇಶಕಿ ಟಾ. ಪದ್ಮಾ ಸುಬ್ರಹ್ಮಣ್ಯ, ಅಕ್ಷರ ಸಂತ ಹರೇಕಳ ಹಾಜಬ್ಬ, ನಿಟ್ಟೆ ವಿವಿ ಕುಲಪತಿ ಎನ್. ವಿನಯ ಹೆಗ್ಡೆ, ಚೆನ್ನೈನ ಟಿಎಜಿ-ವಿಎಚ್‌ಎಸ್ ಡಯಾಬಿಟೀಸ್ ರೀಸರ್ಚ್ ಸೆಂಟರ್‌ನ ಮುಖ್ಯಸ್ಥ ಡಾ. ಸಿ.ವಿ. ಕೃಷ್ಣಸ್ವಾಮಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಭಾಗವಹಿಸಲಿದ್ದಾರೆ. ಎನ್.ಶ್ರೀಕಾಂತ್ ಮತ್ತು ಅಶ್ವತಿ ಶ್ರೀಕಾಂತ್ ಭರತನಾಟ್ಯ ನೃತ್ಯವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ್ ರಾವ್ ಉಪಸ್ಥಿತರಿದ್ದರು.
Next Story





