ಕಾಮಿಡಿ ಪಾತ್ರಸುಲಭವಲ್ಲ

‘‘ಅದು ಚಿತ್ರ ಮುನ್ನಡೆಸುವ ಕಾರ್ಪೊರೇಟ್ ಟೈಕೂನ್ ಒಬ್ಬರ ಕುತೂಹಲಕರ ಪಾತ್ರ. ನಾನು ರೋಹಿತ್ ಅವರ ಕಟ್ಟಾ ಅಭಿಮಾನಿ. ಅವರ ಕಾಮಿಡಿ ಬ್ರಾಂಡ್ ನನಗಿಷ್ಟ. ಆ ಸಂಭಾಷಣೆ ಅಪೂರ್ವ. ಅದರ ಬಣ್ಣನೆ ವೇಳೆ ನನಗೆ ದ್ವಂದ್ವ ಇತ್ತು’’-ಮಧುರ್ ಭಂಡಾರ್ಕರ್ ಅವರ ‘ಇಂದು ಸರ್ಕಾರ್’ ಚಿತ್ರದ ಎರಡು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇರುವಾಗ ನೀಲ್ ನಿತಿನ್ ಮುಖೇಶ್ ಬಣ್ಣಿಸಿದ್ದು ಹೀಗೆ. ಅವರ ವಿವಾಹದ ಬಳಿಕ ಚಿತ್ರೀಕರಣ ಪೂರ್ಣವಾಗಲಿದೆ.
ಮದುವೆಗಾಗಿ ಇಳಿಸಿಕೊಂಡಿದ್ದ ತೂಕವನ್ನು ತುರ್ತು ಪರಿಸ್ಥಿತಿ ಸಂದರ್ಭದ ಈ ಚಿತ್ರಕ್ಕಾಗಿ ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಳ್ಳಬೇಕಾಯಿತು. ‘ಗೋಲ್‌ಮಾಲ್ ಅಗೈನ್’ ಸಿದ್ಧತೆಗಾಗಿ ಬಹುಶಃ ಮತ್ತೆ ಆ ಪಾತ್ರದ ಮೈಕಟ್ಟಿಗೆ ಅನುಗುಣವಾಗಿ ಒಂದಷ್ಟು ಕಸರತ್ತನ್ನು ಮಾಡಬೇಕಾಗುತ್ತದೆ’’ ಎಂದು ನೀಲ್ ಹೇಳಿದ್ದಾರೆ. ಕಾಮಿಡಿ ಪಾತ್ರ ಅತ್ಯಂತ ಕಠಿಣ ಎನ್ನುವುದು ಅವರ ವಿಶ್ಲೇಷಣೆ.
ಗೋಲ್‌ಮಾಲ್ ಸರಣಿಯ ಚಿತ್ರಗಳೂ ಸೇರಿದಂತೆ ಬಹುತೇಕ ಚಿತ್ರಗಳನ್ನು ರೋಹಿತ್ ಗೋವಾದಲ್ಲಿ ಚಿತ್ರೀಕರಿಸಿದ್ದಾರೆ. ಬಾಲಿವುಡ್‌ನಲ್ಲಿ 10 ವರ್ಷ ಪೂರೈಸಿದ ನನ್ನನ್ನು ಗೋಲ್‌ಮಾಲ್ ಅಗೈನ್ ಮತ್ತೆ ನನ್ನ ಮೊದಲ ಚಿತ್ರದ ಚಿತ್ರೀಕರಣದ ಜಾಗಕ್ಕೇ ಒಯ್ಯುತ್ತಿದೆ. ‘ಜಾನಿ ಗದ್ದಾರ್’ ಎಂಬ ಚೊಚ್ಚಲ ಚಿತ್ರಕ್ಕಾಗಿ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿತ್ತು ಎಂದು ವಿವರಿಸಿದರು.
ಹತ್ತು ವರ್ಷದ ವೃತ್ತಿಬದುಕಿನಲ್ಲಿ ಸಾಧನೆಯ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ, ನಿಮ್ಮ ಕೆಲಸದ ಬಗ್ಗೆ ನಿಮಗೆ ತೃಪ್ತಿ ಇದ್ದರೆ, ಅದು ನಿಮ್ಮ ಪತನಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ನನ್ನದು. ಆದ್ದರಿಂದ ಯಾವ ನಟ ಕೂಡಾ ತಾನು ಸಂತುಷ್ಟ ಎಂದು ಹೇಳಿಕೊಳ್ಳಲಾರ. ನಾನು ಕ್ರಮಿಸಬೇಕಾದ ದಾರಿ ದೂರ ಇದೆ. ಉದ್ಯಮದಲ್ಲಿ ಕೆಲಸ ಮಾಡಲು ನನಗೆ ಸಂತೋಷವಿದೆ ಇದೀಗ ನೀಲ್ ದೊಡ್ಡ ದಿನಕ್ಕಾಗಿ ಸಿದ್ಧತೆಯಲ್ಲಿದ್ದಾರೆ. ‘‘ನನಗೆ ನಿಜಕ್ಕೂ ರೋಮಾಂಚನವಾಗುತ್ತಿದೆ’’ ಎನ್ನುತ್ತಾರವರು.
ಪರಿಣಿತಿ ಚೋಪ್ರಾ, ಅರ್ಷದ್ ವರ್ಶಿ, ತುಷಾರ್ ಕಪೂರ್, ಕುನಾಲ್ ಕೆಮ್ಮು, ಶ್ರೇಯಸ್ ತಲ್ಪಾದೆ ಹಾಗೂ ಟಬು ಕೂಡಾ ತಾರಾಗಣದಲ್ಲಿದ್ದಾರೆ.







