ರೋಸ್ ವ್ಯಾಲಿ ಹಗರಣ: ಬಂಧಿತ ಟಿಎಂಸಿ ಸಂಸದನ ಜಾಮೀನು ಅರ್ಜಿ ತಿರಸ್ಕೃತ

ಖುರ್ದಾ (ಒಡಿಶಾ), ಫೆ.4: ‘ರೋಸ್‌ವ್ಯಾಲಿ ಗ್ರೂಪ್’ ಚಿಟ್‌ಫಂಡ್ ಹಗರಣದಲ್ಲಿ ಶಾಮೀಲಾದ ಆರೋಪದಲ್ಲಿ ಬಂಧಿತರಾಗಿರುವ ಟಿಎಂಸಿ ಸಂಸದ ಸುದೀಪ್ ಬಂದೋಪಾಧ್ಯಾಯ ಅವರ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವೊಂದು ಶನಿವಾರ ತಿರಸ್ಕರಿಸಿದೆ. ಸುದೀಪ್ ಬಂದೋಪಾಧ್ಯಾಯ ಹಗರಣದ ತನಿಖೆಗೆ ಸಹಕರಿಸುತ್ತಿದ್ದು, ಅವರನ್ನು ಜಾಮೀನು ಬಿಡುಗಡೆಗೊಳಿಸಬೇಕೆಂದು ಕೋರಿ ಅವರ ವಕೀಲರು ಸಲ್ಲಿಸಿದ ಅರ್ಜಿಯನ್ನು ಖುರ್ದಾದ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಈ ಮೊದಲು ಸಿಬಿಐ ನಿಯೋಜಿತ ನ್ಯಾಯಾಲಯವು ಕೂಡಾ ಬಂದೋಪಾಧ್ಯಾಯ ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು. ಟಿಎಂಸಿಯಿಂದ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಬಂದೋಪಾಧ್ಯಾಯ ಅವರನ್ನು ಜನವರಿ 3ರಂದು ಕೋಲ್ಕತಾದಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ವಿಚಾರಣೆಗಾಗಿ ಒಡಿಶಾಕ್ಕೆ ಕರೆತರಲಾಗಿದ್ದು, ರಿಮಾಂಡ್‌ನಲ್ಲಿಡಲಾಗಿದೆ.
Next Story





