ಜೇನು ಮೇಳ ಹಾಗೂ ಸಾವಯವ ಮೇಳ
ಮಂಗಳೂರು, ಫೆ.4: ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕದ್ರಿ ಉದ್ಯಾನವನದಲ್ಲಿ ಫೆ.11 ಹಾಗೂ 12ರಂದು ಜೇನು ಮೇಳ ಹಾಗೂ ಸಾವಯವ ಮೇಳವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜೇನಿನ ಸಾಕಣೆ, ಸಾವಯವ ಕೃಷಿ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಹಾಗೂ ಜೇನು, ಜೇನಿನ ಉತ್ಪನ್ನಗಳು, ಜೇನಿನ ಮೌಲ್ಯವರ್ಧಿತ ಉತ್ಪನ್ನಗಳು, ಜೇನಿನಿಂದ ತಯಾರಿಸಲ್ಪಡುವ ಔಷಧಿಗಳು, ಸಾವಯವ ಉತ್ಪನ್ನಗಳು, ಸಾವಯವ ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು.
ಈ ನಿಟ್ಟಿನಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಆಸಕ್ತ ರೈತರು, ಸಂಘ ಸಂಸ್ಥೆಗಳು, ಉದ್ದಿಮೆದಾರರಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ತೋಟಗಾರಿಕೆ ಇಲಾಖೆಗೆ ದೂರವಾಣಿ ಸಂಖ್ಯೆ- 0824-2412628, 9480354968 ನ್ನು ಸಂಪರ್ಕಿಸಲು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
Next Story





