ಅಂಧರ ಟ್ವೆಂಟಿ-20 ವಿಶ್ವಕಪ್: ಭಾರತ ಚಾಂಪಿಯನ್

ಅಹ್ಮದಾಬಾದ್, ಫೆ.4: ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ ಭಾರತ ತಂಡ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿ 2ನೆ ಆವೃತ್ತಿಯ ಅಂಧರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಶನಿವಾರ ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ ಶ್ರೀಲಂಕಾ ತಂಡ ಚಂದನ್ ದೇಶಪ್ರಿಯ(62) ಅರ್ಧಶತಕ ಹಾಗೂ ಸುಮನ್(30) ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಭಾರತ ತಂಡ ಪ್ರಕಾಶ್ ಅವರ ಭರ್ಜರಿ ಬ್ಯಾಟಿಂಗ್(ಅಜೇಯ 99 ರನ್, 20 ಬೌಂಡರಿ) ನೆರವಿನಿಂದ 13.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಪ್ರಕಾಶ್‌ರಲ್ಲದೆ ಕೇತನ್ ಪಟೇಲ್ ನಿರ್ಣಾಯಕ ಅಜೇಯ 56 ರನ್ ಗಳಿಸಿ ಭಾರತಕ್ಕೆ ಸುಲಭ ಗೆಲುವು ತಂದರು.
Next Story





