ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು
ಮುಂಡಗೋಡ, ಫೆ.4: ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೊಡಂಬಿ ಪಂಚಾಯತ್ ವ್ಯಾಪ್ತಿಯ ಹಳ್ಳದ ಮನೆ ನಿವಾಸಿ ಮಾಂತೇಶ ಚೆನ್ನಬಸಪ್ಪ ನಿರಮನಿ(25) ಮೃತಪಟ್ಟ ಯುವಕನಾಗಿದ್ದಾನೆ.
ಮೃತನು ಪೀಟ್ಸರೋಗದಿಂದ ಬಳಲುತ್ತಿದ್ದನು ಎನ್ನಲಾಗಿದ್ದು, ರೋಗದ ಕುರಿತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಸಹಿತ ರೋಗವು ಗುಣವಾಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜ.30 ರಂದು ಸೀಮೆ ಎಣ್ಣೆ ಮೈಮೆಲೆ ಸುರಿದುಕೊಂಡ ಬೆಂಕಿ ಹಚ್ಚಿಕೊಂಡು ಗಂಭೀರಗಾಯಗೊಂಡಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದ್ದಾನೆ.
Next Story





