ನಾಳೆ ಯೆನೆಪೊಯದಲ್ಲಿ ಕಾರ್ಯಾಗಾರ
ಮಂಗಳೂರು, ಫೆ.4: ಯೆನೆಪೊಯ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಷನ್ ಇದರ 25ನೆ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಓರ್ಥೋಡೆಂಟಿಕ್ಸ್ ಮತ್ತು ಡೆಂಟೋಫೇಷಿಯಲ್ ಓರ್ಥೊಪೆಡಿಕ್ಸ್ ವಿಭಾಗದ ವತಿಯಿಂದ ಫೆ.6ರಂದು ‘ಇಂಟರ್‌ನ್ಯಾಷನಲ್ ಇಂಟರ್‌ಡಿಸಿಪ್ಲಿನರಿ ಕ್ರೇನಿಯೋಫೇಷಿಯಲ್ ಸಿಂಪೋಸಿಯಮ್’ ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ.
ಫೆ.7ರಂದು ಓರ್ಥೋಡೆಂಟಿಕ್ಸ್ ಮತ್ತು ಡೆಂಟೋಫೇಷಿಯಲ್ ಓರ್ಥೋಪೆಡಿಕ್ಸ್ ವಿಭಾಗ, ಯೆನೆಪೊಯ ವಿವಿ ಮತ್ತು ಇಟಲಿಯ ಮಿಲಾನ್ ವಿವಿ ಹಾಗೂ ಯೆನೆಪೊಯ ವಿವಿಯ ಓರ್ಥೋಡೆಂಟಿಕ್ಸ್ ಮತ್ತು ಡೆಂಟೋಫೇಷಿಯಲ್ ಓರ್ಥೋಪೆಡಿಕ್ಸ್ ವಿಭಾಗ ಮತ್ತು ಇಟಲಿಯ ರೋಮ್ ವಿವಿ ಜೊತೆ ಒಪ್ಪಂದ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯೆನೆಪೊಯ ವಿವಿಗೆ ಈ ಕಾರ್ಯಕ್ರಮದಿಂದ ಯುರೋಪಿಯನ್ ರಾಷ್ಟ್ರದೊಂದಿಗೆ ಸಂಬಂಧವನ್ನು ಕಲ್ಪಿಸುವ ಅವಕಾಶವಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಡಾ.ಅಖ್ತರ್ ಹುಸೈನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





