ದಡಾರ-ರುಬೆಲ್ಲಾ: ಯಶಸ್ಸಿಗೆ ಆರೋಗ್ಯ ಇಲಾಖೆ ಕರೆ
ಮಂಗಳೂರು, ಫೆ.4: ಯಾವುದೇ ವದಂತಿ, ಅಪಪ್ರಚಾರ, ಸುಳ್ಳು ಸಂದೇಶಗಳಿಗೆ ಕಿವಿಗೊಡದೆ ೆ.7ರಿಂದ ಮಾ.1ರವರೆಗೆ ಜಿಲ್ಲಾದ್ಯಂತ ನಡೆಯಲಿ ರುವ ದಡಾರ-ರುಬೆಲ್ಲಾ ಲಸಿಕೆ ಅಭಿಯಾನವನ್ನು ಯಶಸ್ಸಿ ಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಕಾರಿ ಡಾ.ರಾಮಕೃಷ್ಣ ರಾವ್ ರೆ ನೀಡಿದ್ದಾರೆ.
ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಎಲ್ಲ ಶಾಲೆ, ಅಂಗನವಾಡಿ ಕೇಂದ್ರ, ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಚುಚ್ಚುಮದ್ದು ಕೊಡ ಲಾಗುವುದು. ಇದನ್ನು ನಿರ್ಲಕ್ಷಿಸದೆ ಕಡ್ಡಾಯವಾಗಿ ಹಾಕಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 3,44,038 ಶಾಲಾ ಮಕ್ಕಳು ಮತ್ತು 9 ತಿಂಗಳಿನಿಂದ 6 ವರ್ಷದೊಳಗಿನ 1,28,551 ಮಕ್ಕಳಿದ್ದಾರೆ. ಇವರೆಲ್ಲರಿಗೂ ಉಚಿತ ಲಸಿಕೆ ಹಾಕುವ ಗುರಿಯನ್ನು ಇಲಾಖೆ ಹೊಂದಿದ್ದು, ಅಭಿಯಾನದ ಯಶಸ್ವಿಗೆ 115 ವೈದ್ಯಾಕಾರಿಗಳಿಗೆ, 4 ಶಿಕ್ಷಕರಿಗೆ, 2,014 ಅಂಗನವಾಡಿ ಕಾರ್ಯಕರ್ತೆಯರಿಗೆ, 1,101 ಆಶಾ ಕಾರ್ಯಕರ್ತೆಯರಿಗೆ, ಭಾರತೀಯ ವೈದ್ಯಕೀಯ ಸಂಘದ ವೈದ್ಯರಿಗೆ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ, ಬಿಸಿಎಂ, ಡಾಟಾ ಎಂಟ್ರಿ ಆಪರೇಟರ್ ಸಹಿತ 103 ಮಂದಿಗೆ ಹಾಗೂ 75 ಮಂದಿ ಶೀತಲ ಸರಪಣಿ ನಿರ್ವಹಣಾ ಸಿಬ್ಬಂದಿಗೆ, 450 ಲಸಿಕಾದಾರರಿಗೆ, ಮನಪಾ ವಿವಿಧೋದ್ದೇಶದ 50 ಕಾರ್ಯಕರ್ತರಿಗೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ, ಶಿಶು ಅಭಿವೃದ್ಧಿ ಯೋಜನಾಕಾರಿ, ಕ್ಷೇತ್ರ ಶಿಕ್ಷಣಾಕಾರಿಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖಾಕಾರಿ ಸಹಿತ 65 ಮಂದಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದವರು ವಿವರಿಸಿದರು.
ದ.ಕ. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಆರ್‌ಸಿಎಚ್ ಅಕಾರಿ ಡಾ.ಅಶೋಕ ಎಚ್. ಮೊದಲಾದವರು ಉಪಸ್ಥಿತರಿದ್ದರು.
10: ಜಂತುಹುಳ ನಿರ್ಮೂಲನಾ ದಿನಾಚರಣೆ
ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ದಿನಾಚರಣೆಯು ಫೆ.10ರಂದು ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳ ನಿವಾರಣಾ (ಆಲ್ಬೆಂಡರೆಲ್ 400 ಮಿ.ಗ್ರಾಂ) ಮಾತ್ರೆಯನ್ನು ನೀಡಲಾಗುತ್ತದೆ. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮತ್ತು 2ರಿಂದ 19 ವರ್ಷದೊಳಗಿನ ಮಕ್ಕಳಿಗೆ ಪೂರ್ಣ ಮಾತ್ರೆಯನ್ನು ನೀಡಲಾಗುತ್ತದೆ. 6ರಿಂದ 19 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಕರು ಮತ್ತು 1ರಿಂದ 5 ವರ್ಷದೊಳಗಿನ ಹಾಗು ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವುದು. ೆ.10ರಂದು ಮಾತ್ರೆ ಪಡೆಯದವರು ೆ.16ರಂದು ತಪ್ಪದೆ ನೀಡಲು ಡಿಎಚ್‌ಒ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.







