ಲೋಕಾಯುಕ್ತ ಹುದ್ದೆ ಖಾಲಿ ಇಡಬೇಕೆಂಬುದೇ ಕೆಲವರ ಉದ್ದೇಶ: ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

ಉಡುಪಿ, ಫೆ.4: ‘ನನ್ನ ಮೇಲೆ ಆರೋಪ ಮಾಡುವವರ ಉದ್ದೇಶ ಸುಪ್ರೀಂ ಕೋರ್ಟ್‌ನಲ್ಲಿ ಸಂಪಾದನೆ ಇರುವ ಇವರು ಈ ರಗಳೆ ಬೇಡ ಅಂತ ಹೇಳಿ ಈ ಹುದ್ದೆಯನ್ನು ಬಿಟ್ಟು ಹೋಗಬೇಕು ಎಂಬುದು. ಕೆಲವರಿಗೆ ಲೋಕಾಯುಕ್ತ ಹುದ್ದೆಯನ್ನು ಖಾಲಿಯೇ ಇಡಬೇಕೆಂಬುದು ಇದೆ. ಆದರೆ ನಾನು ಈ ಹುದ್ದೆಯನ್ನು ಬಿಟ್ಟು ಹೋಗಲ್ಲ. ಅಪವಾದ ಮಾಡಿದಾಗ ಬಿಟ್ಟು ಹೋದರೆ ಅದನ್ನು ಒಪ್ಪಿದಂತೆ ಆಗುತ್ತದೆ’ ಎಂದು ನೂತನ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.
ತನ್ನ ಹುಟ್ಟೂರು ಉಡುಪಿ ಸಮೀಪದ ಉಪ್ಪೂರು ದೇವಸ್ಥಾನಕ್ಕೆ ಇಂದು ಭೇಟಿ ನೀಡಲು ಆಗಮಿಸಿದಾಗ ಉಡುಪಿ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಎಲ್ಲ ಅಪವಾದಕ್ಕೆ ರಾಜ್ಯಪಾಲರು ಸೇರಿದಂತೆ ಆಯ್ಕೆ ಸಮಿತಿಯ 6 ಮಂದಿ ತನ್ನನ್ನು ಆಯ್ಕೆ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಮುಂದೆ ಏನಾದರೂ ಉಡುಪಿಯ ಶ್ರೀಕೃಷ್ಣ ಪರಮಾತ್ಮನೇ ನೋಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚು ಏನು ಹೇಳಲ್ಲ ಎಂದರು.
ಅರ್ಜಿಯಲ್ಲಿ ಮನೆಗೆ ಸಂಬಂಸಿದ ಪ್ರಮಾಣಪತ್ರ ಸಲ್ಲಿಸಿಲ್ಲ ಎಂಬ ಆರೋಪದ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಪಡೆದುಕೊಂಡ ಸೈಟ್ ಬಿಡಿಎ ಲೇಔಟ್‌ನ ಒಳಗೆ ಇಲ್ಲ. ಹಾಗಾಗಿ ಅರ್ಜಿಯಲ್ಲಿ ಮನೆ ಇದೆ ಅಂತ ಹೇಳಿದೆ. ಆದರೆ ಪ್ರಮಾಣಪತ್ರ ಕೊಟ್ಟಿಲ್ಲ. ಇಲ್ಲಿ ನನಗಿಂತ ದೊಡ್ಡ ದೊಡ್ಡ ಸ್ಥಾನದಲ್ಲಿರುವವರಿಗೂ ಸೈಟ್ ಇದೆ. ಇದರಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ. ಏಳೆಂಟು ಸೊಸೈಟಿಗೆ ವಕೀಲನಾಗಿರುವ ನನಗೆ ಸಾಕಷ್ಟು ಸೈಟ್ ಮಾಡಬಹುದಿತ್ತು. ಆದರೆ ನಾನು ಮಾಡಿಲ್ಲ ಎಂದರು. ಎಸಿಬಿ ರಚನೆಯಿಂದ ಲೋಕಾಯುಕ್ತದ ಬಲ ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಾಯುಕ್ತ ಬಲ ಕಡಿಮೆ ಆಗಿಲ್ಲ. ಆದರೆ ಎಸಿಬಿಯಿಂದ ಲೋಕಾಯುಕ್ತಕ್ಕೆ ಸ್ಪಲ್ಪಮಟ್ಟಿಗೆ ತೊಂದರೆ ಇದೆ. ಆದರೆ ನಾವು ಸೂಚಿಸಿದ ಪ್ರಕರಣದ ವಿಚಾರಣೆಯನ್ನು ಎಸಿಬಿಯವರು ಮಾಡಲೇ ಬೇಕು. ನಾವು ನಿಮ್ಮ ಅೀನದಲ್ಲಿ ಇಲ್ಲ, ಮುಖ್ಯಮಂತ್ರಿಯವರ ಅೀನದಲ್ಲಿ ಇರುವವರು ಅಂತ ಹೇಳಲು ಆಗಲ್ಲ. ಲೋಕಾಯುಕ್ತಕ್ಕೆ ಮುಖ್ಯಮಂತ್ರಿ ಮೇಲೂ ಅಕಾರ ಇದೆ ಎಂದರು.
ನೇರವಾಗಿ ದೂರು ನೀಡಿ: ಭ್ರಷ್ಟಾಚಾರಕ್ಕೆ ಸಂಬಂಸಿದಂತೆ ಯಾರೇ ಮಾಹಿತಿ ನೀಡಿದರೂ ಕೂಡ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಯಾರ ಹೆಸರು ಕೂಡ ಹೇಳುವುದಿಲ್ಲ. ಲೋಕಾಯುಕ್ತ ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ನೇರವಾಗಿ ನನಗೆ ತಿಳಿಸಬಹುದು. ಇತರ ಲೋಕಾಯುಕ್ತರಿಗಿಂತ ನನ್ನ ಕಾರ್ಯವೈಖರಿ ಭಿನ್ನವಾಗಿರುತ್ತದೆ. ಅದನ್ನು ಈಗಲೇ ಹೇಳುವುದಿಲ್ಲ. ಕಾದು ನೋಡಬೇಕು ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಹೇಳಿದರು.
ಲೋಕಾಯುಕ್ತರ ಅೀನದಲ್ಲಿ 2,400 ಹಾಗೂ ಇಬ್ಬರು ಉಪಲೋಕಾಯುಕ್ತರ ಅೀನದಲ್ಲಿ ಸುಮಾರು 4 ಸಾವಿರ ಕಡತಗಳು ಇತ್ಯರ್ಥಕ್ಕೆ ಬಾಕಿ ಇವೆ. ಲೋಕಾಯುಕ್ತರು ಇಲ್ಲದಿದ್ದಾಗಲೂ ಉಪಲೋಕಾಯುಕ್ತರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣದ ವಿಚಾರಣೆ ಕೂಡ ನ್ಯಾಯಾಲಯದಲ್ಲಿ ವೇಗವಾಗಿ ನಡೆಯುತ್ತಿದೆ. ನಾನು ಬಂದ ನಂತರ ಕೆಲವು ಕಡತಗಳನ್ನು ಇತ್ಯರ್ಥಗೊಳಿಸಿದ್ದೇನೆ ಎಂದವರು ತಿಳಿಸಿದರು. ಹಿಂದಿನ ಲೋಕಾಯುಕ್ತರು ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. ನಾವು ಒಳ್ಳೆಯ ಕೆಲಸ ಮಾಡಬೇಕೆಂದು ಹೇಳಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಬರುತ್ತಿದ್ದ ಒಳ್ಳೆಯ ಸಂಪಾದನೆಯನ್ನು ಬಿಟ್ಟು ಬಂದಿದ್ದೇನೆ. ನಾನು ನಿರುದ್ಯೋಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಲ್ಲ. ಪೂರ್ಣಾವ ಉದ್ಯೋಗಿಯಾಗಿದ್ದವನು. ರಾಜ್ಯಕ್ಕೆ ನನ್ನಿಂದ ಏನಾದರೂ ಒಳ್ಳೆಯ ಕೊಡುಗೆ ನೀಡಲು ಬಂದಿದ್ದೇನೆ. ನಾನಾಗಿ ಹುಡುಕಿಕೊಂಡು ಬಂದದ್ದಲ್ಲ ಎಂದವರು ಹೇಳಿದರು. ಲಂಚ ಕೊಡುವವರೇ ಹೆಚ್ಚಾದರೆ ತೆಗೆದು ಕೊಳ್ಳುವವರು ಇದ್ದೇ ಇರುತ್ತಾರೆ. ಲಂಚ ಕೊಡುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಮುಖ್ಯ ಉದ್ದೇಶ. ಅದೇ ರೀತಿ ಸರಕಾರದ ಬಡವರ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವಂತೆ ಮಾಡಲಾಗುವುದು ಎಂದವರು ಹೇಳಿದರು.
ರೆಡ್ಡಿ, ಡಿಕೆಶಿ ಪ್ರಕರಣ ಮುಟ್ಟಲ್ಲ
ಸುಪ್ರೀಂ ಕೋರ್ಟ್ ನ್ಯಾಯವಾದಿಯಾಗಿದ್ದಾಗ ಗಣಿಧಣಿ ಜನಾರ್ದನ ರೆಡ್ಡಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ಗೆ ಪ್ರಕರಣದ ಬಗ್ಗೆ ವಾದ ಮಾಡಿದ್ದೇನೆ. ಆದರೆ ಜನಾರ್ದನ ರೆಡ್ಡಿಯನ್ನು ಇಂದಿಗೂ ನಾನು ನೋಡಿಲ್ಲ. ಡಿ.ಕೆ.ಶಿವಕುಮಾರ್ ಸಚಿವರಾಗಿ ನನಗೆ ಪರಿಚಯ ಇದ್ದರೂ ನನ್ನ ಬಂಧು ಅಲ್ಲ. ಲೋಕಾಯುಕ್ತದಲ್ಲಿ ಇರುವ ಇವರಿಬ್ಬರ ಪ್ರಕರಣವನ್ನು ನಾನು ವಿಚಾರಣೆ ಮಾಡಲ್ಲ. ಅದನ್ನು ಬೇರೆಯವರಿಂದ ಮಾಡಿಸಲಾಗುವುದು. ನಾನು ಮಾಡಿದರೆ ಬಹಳ ದೊಡ್ಡ ಅಪರಾಧವಾಗುತ್ತದೆ. ಆ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ತಿದ್ದುಪಡಿ ತರಬೇಕಾದ ಅಗತ್ಯವಿದೆ.
ನಾನು ವಾದಿಸಿದವರು ಮಾತ್ರವಲ್ಲ ನನ್ನ ಸಂಬಂಕರ ಕೇಸ್ ಕೂಡ ನಾನು ಮುಟ್ಟಲು ಆಗಲ್ಲ. ಹಾಗೆ ಮಾಡಿದರೆ ನಾನು ಬಹಳ ದೊಡ್ಡ ಅಪರಾಯಾಗುತ್ತೇನೆ. ರೆಡ್ಡಿ, ಡಿಕೆಸಿ ಮಾತ್ರವಲ್ಲದೆ ಸತ್ಯಂ ಪ್ರಕರಣದ ಆರೋಪಿಗಳು, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧದ ಪ್ರಕರಣದ ಬಗ್ಗೆಯೂ ನಾನು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದೇನೆ.
*ನ್ಯಾ.ವಿಶ್ವನಾಥ್ ಶೆಟ್ಟಿ







