ಪ್ರೊ.ಆರ್.ಶೇಷ ಶಾಸಿಗೆ ‘ತಾಳ್ತಜೆ ಕೇಶವ ಪ್ರಶಸ್ತಿ’

ಉಡುಪಿ, ೆ.4: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ 2016-17ನೇ ಸಾಲಿನ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಗೆ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ತೆಲುಗು ಮತ್ತು ತೌಲನಿಕ ಸಾಹಿತ್ಯ ವಿಭಾಗದ ನಿವೃತ್ತ ಕನ್ನಡ ಪ್ರೊೆಸರ್ ಆರ್.ಶೇಷ ಶಾಸಿ ಆಯ್ಕೆಯಾಗಿದ್ದಾರೆ.
ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕದ ವೀರಗಲ್ಲುಗಳ ಮೇಲೆ ಸಂಶೋಧನೆಗಾಗಿ ಪಿಎಚ್‌ಡಿ ಪಡೆದ ಪ್ರೊ.ಶಾಸಿ ಅವರು ಶಾಸನ ಶಾಸ, ಗ್ರಂಥಲಿಪಿ ಶಾಸ, ಜಾನಪದ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಹಲವು ವಿಷಯಗಳನ್ನು ಬೋಸಿದ್ದಾರೆ. ಸಂಶೋಧಕರಾಗಿ, ಕನ್ನಡ ಮತ್ತು ಅನುವಾದ ವಿಭಾಗದ ಮುಖ್ಯಸ್ಥರಾಗಿ ಪ್ರೊ.ಶಾಸಿ ಕಾರ್ಯ ನಿರ್ವಹಿಸಿದ್ದಾರೆ.
ಅವರ ಸಾಧನೆಗಳಿಗಾಗಿ ಡಾ.ತಿಮ್ಮನಜಲ ಕೋದಂಡ ರಾಮಯ್ಯ ಪ್ರಶಸ್ತಿ, ಡಾ.ಬಿ.ಎನ್.ಶಾಸಿ, ಸ್ಮಾರಕ ಪ್ರಶಸ್ತಿ ಹಾಗೂ ಡಾ.ಬಿ.ಆರ್.ಗೋಪಾಲ್ ನೆನಪಿನ ಪ್ರಶಸ್ತಿಗಳು ದೊರೆತಿವೆ ಎಂದು ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ ಪ್ರಕಟನೆಯಲ್ಲಿ ತಿಳಿಸಿದರು.
Next Story





