ಐವರು ಅಂತಾರಾಜ್ಯ ದರೋಡೆಕೋರರ ಬಂಧನ
ಮನೆ ಮಂದಿಯನ್ನು ಕಟ್ಟಿಹಾಕಿ ಶೋಧ ಪ್ರಕರಣ
ಬಂಟ್ವಾಳ, ಫೆ.4: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ನಿದಿ ಶೋಧ ನಡೆಸಿದ ಐವರು ಅಂತಾರಾಜ್ಯ ದರೋಡೆಕೋರರನ್ನು ವಿಟ್ಲ ಪೊಲೀಸರ ತಂಡ ಬಂಸಿದ್ದಾರೆ. ಬಂತರನ್ನು ಕನ್ಯಾನ ಗ್ರಾಮದ ಪೊಯ್ಯೆಕಂಡ ನಿವಾಸಿ ಇಕ್ಬಾಲ್ ಯಾನೆ ಇಕ್ಕು(22), ಕರೋಪಾಡಿ ಗ್ರಾಮದ ಕೋಡ್ಲ ನಿವಾಸಿ ಮುಹಮ್ಮದ್ ಅಲಿ ಯಾನೆ ಅಲಿಮೋನು(29), ಕನ್ಯಾನ ಗ್ರಾಮದ ಮಂಡಿಯೂರು ನಿವಾಸಿ ಅಬ್ಬಾಸ್(26), ಕೊಳ್ನಾಡು ಗ್ರಾಮದ ಕುಲಾಲ್ ಕೋಡಿ ನಿವಾಸಿ ಅಶ್ರ್ ಯಾನೆ ಎಲ್ಟಿಟಿ ಅಶ್ರ್(21), ಮಂಜೇಶ್ವರ ಬಾಯಕಟ್ಟೆ ಲಕ್ಷ ಬೀಡು ನಿವಾಸಿ ಆಶಿಕ್.ಪಿ(19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಲೆತ್ತೂರು ಸಮೀಪ ಕೃತ್ಯಕ್ಕೆ ಬಳಸಲಾದ ವಾಹನಗಳು ತಿರುಗಾಡುತ್ತಿದೆ ಎಂಬ ಖಚಿತವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಅದರ ಆಧಾರದಲ್ಲಿ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಪೈವಳಿಕೆ ನಿವಾಸಿ ಶಾಫಿ.ಕೆ, ಕೇರಳದ ಶಾಫಿ ಯಾನೆ ಬೊಟ್ಟು ಶಾಫಿ, ಮಿತ್ತನಡ್ಕ ಆರಿಸ್ ಹಾಗೂ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿನ ವಿಘ್ನರಾಜ್ ಎಂಬವರ ಮನೆಗೆ ಕಳೆದ ಜ.24 ರಂದು ತಡರಾತ್ರಿ 2 ಗಂಟೆಗೆ ನುಗ್ಗಿದ ದರೋಡೆಕೋರರು ಮನೆಯ ಎದುರುಭಾಗದಲ್ಲಿ ನಿಗಾಗಿ ಶೋಧ ನಡೆಸಿದ್ದಾರೆ. ಇನ್ನೋವಾ ಹಾಗೂ ಆಲ್ಟೊ ಕಾರಿನಲ್ಲಿ ಬಂದ ತಂಡ ಮನೆಮಂದಿಯನ್ನು ಬೆದರಿಸಿ ಕಟ್ಟಿಹಾಕಿ ನಿಗಾಗಿ ಶೋಧ ನಡೆಸಿದ್ದರು. ಆದರೆ ಏನೂ ಸಿಗದ ಕಾರಣ, ಮನೆಯ ಸಿಸಿ ಕ್ಯಾಮರಾವನ್ನು ಡಿವಿಆರ್ ಸಹಿತ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ವಿಘ್ನರಾಜ್ ನೀಡಿದ ದೂರಿನಂತೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಬೊರಸೆ ಈ ವೇಳೆ ಸ್ಥಳಕ್ಕೆ ಆಗಮಿಸಿ ವಿಶೇಷ ಪೊಲೀಸ್ ತಂಡ ರಚಿಸಿ, ಆರೋಪಿಗಳ ಪತ್ತೆಗೆ ನಿರ್ದೇಶನ ನೀಡಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಇಕ್ಬಾಲ್ ಯಾನೆ ಇಕ್ಕು, ಯುವತಿಯೋರ್ವಳ ಅಪಹರಣ, ಕನ್ಯಾನದಲ್ಲಿ ಆಸ್ಿ ಕೊಲೆಪ್ರಕರಣ ಹಾಗೂ 2016ರಲ್ಲಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಮುಹಮ್ಮದ್ ಅಲಿ ವಿರುದ್ಧ ಒಂದು ಗಲಾಟೆ ಪ್ರಕರಣ, ಪುತ್ತೂರು ಠಾಣೆಯ ಅಪಹರಣ ಪ್ರಕರಣ, ಕನ್ಯಾನ ಆಸ್ಿ ಕೊಲೆ ಪ್ರಕರಣ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಭೂಷಣ್ ಜಿ ಬೊರಸೆ, ಡಾ.ವೇದಮೂರ್ತಿ ಯವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವೀಶ್ ಸಿ.ಆರ್‌ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಸಿಐ ಬಿ.ಕೆ.ಮಂಜಯ್ಯ, ವಿಟ್ಲ ಠಾಣಾಕಾರಿ ನಾಗರಾಜ್, ಬೆಳ್ತಂಗಡಿ ಠಾಣಾಕಾರಿ ರವಿ ಬಿ.ಎಸ್, ಸಿಬ್ಬಂದಿ ಬಾಲಕೃಷ್ಣ, ಗಿರೀಶ್, ಉದಯ್, ಸಿಜು, ಜಯಕುಮಾರ್, ಜನಾದರ್ನ್, ಪ್ರವೀಣ್ ರೈ, ರಮೇಶ್, ಪ್ರವೀಣ್ ಕುಮಾರ್, ಭವಿತ್ ರೈ, ಸತೀಶ್, ಸಂಪತ್, ದಿವಾಕರ್, ಚಾಲಕರಾದ ರಘುರಾಮ, ವಿಜಯೇಶ್ವರ, ಸತ್ಯಪ್ರಕಾಶ್, ಯೋಗೀಶ್ ಭಾಗವಹಿಸಿದ್ದರು.
ಪ್ರಕರಣ ಭೇದಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ ಬೊರಸೆಯವರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಘೋಷಿಸಿದ್ದಾರೆ ಎನ್ನಲಾಗಿದೆ.







