ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ವರ ಸಾವು

ತುಮಕೂರು, ಫೆ.5: ವರನೊಬ್ಬ ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ.
ವಸಂತ ಕುಮಾರ್ ಎಂಬವರೇ ವಿವಾಹ ಮುಹೂರ್ತಕ್ಕೆ ಸಿದ್ಧವಾಗುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ನತದೃಷ್ಟ ವರ.
ವಧು ವರ ಇಬ್ಬರೂ ಸಹ ಎಂ.ಟೆಕ್ ಪದವೀಧರರು. ನಿನ್ನೆ ರಾತ್ರಿ ವಸಂತ ಕುಮಾರ್ಇವರ ವಿವಾಹದ ಅಂಗವಾಗಿ ಆರತಕ್ಷತೆ ಕಾರ್ಯಕ್ರಮಗಳು ನಡೆದಿತ್ತು. ಇಂದು ವಿವಾಹ ನಿಗದಿಯಾಗಿತ್ತು.ಆದರೆ ಅವರ ವಿವಾಹ ನಡೆಯಲಿಲ್ಲ. ವರ ಮೃತಪಟ್ಟ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಬಂಧುಗಳು ಆಘಾತಗೊಂಡಿದ್ದಾರೆ. ಕಲ್ಯಾಣ ಪಂಟಪದಲ್ಲಿ ನೀರವ ಮೌನ ಆವರಿಸಿದೆ.
Next Story





