ಠಾಣೆಯಲ್ಲಿ ಆರೋಪಿ ಸಾವು; ಪಿಎಸ್ಐ, ಚಾಲಕ ಸಸ್ಪೆಂಡ್

ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್
ಗದಗ, ಫೆ.5: ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಪೊಲೀಸ್ ಠಾಣೆಯಲ್ಲೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಕ್ಷ್ಮೀಶ್ವರ ಪೊಲೀಸ್ ಠಾಣೆಯ ಪಿಎಸ್ಐ ದೇವಾನಂದ ಮತ್ತು ಅವರ ಜೀಪು ಚಾಲಕನನ್ನು ಅಮಾನತು ಮಾಡಲಾಗಿದೆ.
ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಉತ್ತರ ವಲಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್ ತಿಳಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ಬಟ್ಟೂರ ಶಿವಾನಂದ ಗೂಳಿ ಎಂಬವರನ್ನು ಅಕ್ರಮ ಮರಳುಗಾರಿಕೆಯ ವಾಹನ ಓಡಿಸುತ್ತಿದ್ದ ಎಂಬ ಆರೋಪದಲ್ಲಿ ಆಧಾರದ ಮೇಲೆ ಪೊಲೀಸರು ಠಾಣೆಗೆ ಕರೆಯಿಸಿ ರಾತ್ರಿ ವಿಚಾರಣೆ ನಡೆಸುತ್ತಿದ್ದರು. ಆದರೆ ವಿಚಾರಣೆ ವೇಳೆ ವೇಳೆ ಶಿವಾನಂದ ಸಾವನ್ನಪ್ಪಿದ್ದರು. ಶಿವಾನಂದ ನಿಗೂಢ ಸಾವಿನ ಹಿನ್ನೆಲೆಯಲ್ಲಿ ರೊಚ್ಸಿಗೆದ್ದ ಗ್ರಾಮಸ್ಥರು. ಠಾಣೆಗೆ ಮುತ್ತಿಗೆ ಹಾಕಿ ಠಾಣೆಯೊಳಗಿದ್ದ ಕಡತಗಳು ಮತ್ತು ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದರು. ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.





