ಕುಂಬಳೆ: 18 ಕಿಲೋ ಗಾಂಜಾದೊಂದಿಗೆ ಓರ್ವನ ಬಂಧನ
.gif)
ಮಂಜೇಶ್ವರ, ಫೆ.5: ಗಾಂಜಾದೊಂದಿಗೆ ಯುವಕನೋರ್ವನನ್ನು ಕುಂಬಳೆ ಅಬಕಾರಿ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ತಿರುವನಂತಪುರ ಜಿಲ್ಲೆಯ ನೆಯ್ಯಾಟ್ಟಿನ್‌ಕರ ನಿವಾಸಿ ರತೀಶ್(30) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 18.750 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಪೊಲೀಸರಿಗೆ ಸಿಕ್ಕಿದ ರಹಸ್ಯ ಮಾಹಿತಿ ಮೇರೆಗೆ ರವಿವಾರ ಬೆಳಿಗ್ಗೆ ಕುಂಬಳೆ ರೈಲು ನಿಲ್ದಾಣ ಬಳಿಯಿಂದ ಗಾಂಜಾದೊಂದಿಗೆ ಈತನನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಪಿ.ಜೆ.ರಾಬಿನ್ ಬಾಬು, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎಂ.ವಿ.ಬಾಬುರಾಜ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪಿ.ಶಶಿ, ರಾಜೀವನ್, ಎಂ.ವಿ.ಸಜಿತ್, ಕೆ.ನೌಶಾದ್, ಚಾಲಕ ಮೈಕೆಲ್ ಜೋಸೆಫ್ ಭಾಗಿಯಾಗಿದ್ದರು.
Next Story





