ಮೂಡುಬಿದಿರೆ: ವಿವಾಹಿತ ಮಹಿಳೆ ನಾಪತ್ತೆ

ಮೂಡುಬಿದಿರೆ, ಫೆ.5: ವಿವಾಹಿತ ಮಹಿಳೆಯೋರ್ವರು ಕಾಣೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುಚ್ಚಮೊಗ್ರು ಗ್ರಾಮದ ರೇಂಜರ್ ಕೋಡಿ ಎಂಬಲ್ಲಿಯ ಅರುಣ್ ಡಿಸೋಜಎಂಬವರ ಸಹೋದರಿ ಶಾಂತಿಪ್ರಿಯಾ ಡಿಸೋಜ(28) ನಾಪತ್ತೆಯಾದಾಕೆ. ಸಹೋದರನ ಮನೆಯಲ್ಲಿದ್ದ ಈಕೆ ಜ.26ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಾಂತಿಪ್ರಿಯಾರನ್ನು 7 ತಿಂಗಳ ಹಿಂದೆ ಸಾಣೂರು ಅಲ್ವಿನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಹರೆ ಹೀಗಿದೆ: ಎಣ್ಣೆ ಕಪ್ಪು ಮೈಬಣ್ಣ, 5.5 ಅಡಿ ಎತ್ತರ, ಸಾಧಾರಣ ದಪ್ಪ ಶರೀರ, ಉದ್ದ ಕೂದಲು ಹೊಂದಿದ್ದು, ಕಾಣೆಯಾದ ದಿನ ಚೂಡಿದಾರ್ ಧರಿಸಿದ್ದರು. ಕೊಂಕಣಿ, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





