ಸಿ.ಕೆ.ಜಾನುವಿನಂತಹ ಹೋರಾಟಗಾರ್ತಿಗೆ ಬಿಜೆಪಿಗೆ ಹೋಗುವ ಪರಿಸ್ಥಿತಿ! : ನೋವು ವ್ಯಕ್ತಪಡಿಸಿದ ರಾಧಿಕಾ ವೇಮುಲಾ
.jpg)
ಕೊಚ್ಚಿ,ಫೆ.5: ಕೇರಳದಲ್ಲಿ ಆದಿವಾಸಿಗಳು ಮತ್ತು ದಲಿತರಿಗಾಗಿ ಹೋರಾಡಿದ ಸಿ.ಕೆ. ಜಾನವಿನಂತಹವರು ಬಿಜೆಪಿಗೆ ಹೋಗುವಂತಹ ಪರಿಸ್ಥಿತಿ ಇದೆ ಎನ್ನುವುದನ್ನು ತಿಳಿದು ತಾನು ತುಂಬಾ ಸಂಕಟಪಟ್ಟಿದ್ದೇನೆ ಎಂದು ರೋಹಿತ್ ವೇಮುಲಾರ ತಾಯಿ ರಾಧಿಕಾ ವೇಮುಲಾ ಹೇಳಿದ್ದಾರೆ.
ಅವರು,ಇಲ್ಲಿ ನಡೆದ ಡಿವೈಎಫ್‌ಐ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಕೇರಳದಲ್ಲಿ ದಲಿತ ವಿದ್ಯಾರ್ಥಿ ಆಂದೋಲನಗಳ ವಿರುದ್ಧ ಎಸ್‌ಎಫ್‌ಐ ಮತ್ತು ಇತರರ ಸಂಘಟನೆಗಳು ದಾಳಿ ನಡೆಸಿದ್ದು ವರದಿಯಾಗಿತ್ತು. ಇಂತಹ ದಾಳಿಯ ವೇಳೆ ನನ್ನ ಪುತ್ರ ರೋಹಿತ್ ವೇಮುಲಾರ ಫೋಟೊ ಹರಿದು ಹಾಕಲಾಗಿದೆ. ಇದು ತನಗೆ ತುಂಬಾ ನೋವುಂಟು ಮಾಡಿದೆಎಂದು ಅವರು ಹೇಳಿದರು.
ಈಗ ದಲಿತರು ಆದಿವಾಸಿಗಳು ಕೇರಳದಲ್ಲಿ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಎಡಪಕ್ಷಗಳು ಜೆಎನ್‌ಯುನಲ್ಲಿ ಕೂಡಾ ದಲಿತ ವಿದ್ಯಾರ್ಥಿ ಆಂದೋಲನಗಳನ್ನು ವಿರೋಧಿಸುವ ಶೈಲಿಯನ್ನು ಸ್ವೀಕರಿಸಿದ್ದವು. ಪರಸ್ಪರ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಿಸುವ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ರಾಧಿಕಾ ವೇಮುಲಾ ಸಲಹೆ ನೀಡಿದರು.
ರಾಧಿಕಾ ವೇಮುಲಾ "ರಿಪಬ್ಲಿಕ್ ಆಫ್ ಈಕ್ವಲ್ಸ್" ಎಂಬ ಪುಸ್ತಕವನ್ನು ತಮಿಳ್ನಾಡಿನ ಡಿವೈಎಫ್‌ಐ ಖಜಾಂಚಿ ದೀಪಾರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮ್ಮೇಳನಕ್ಕೆ ಸಂಬಂಧಿಸಿ ಡಿವೈಎಫ್‌ಐ ಹೊರತಂದ ಯೂತ್ ಸ್ಟ್ರೀಂ ಎನ್ನುವ ವಿಶೇಷ ಪುರವಣಿಯನ್ನು ಡಿವೈಎಫ್‌ಐ ನ ಕೇರಳ ಜಂಟಿ ಕಾರ್ಯದರ್ಶಿ ಎಸ್. ಸತೀಶ್‌ನ್ ಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ರಾಧಿಕಾ ವೇಮುಲಾ ತೆಲುಗು ಭಾಷೆಯಲ್ಲಿ ಮಾತಾಡಿದ್ದು, ಅದನ್ನು ಇಂಗ್ಲಿಷ್‌ಗೆ ಅವರ ಪುತ್ರ ರಾಜ ವೇಮುಲಾ ಅನುವಾದಿಸಿದರು ಎಂದು ವರದಿ ತಿಳಿಸಿದೆ.







