ಅಂಬೇಡ್ಕರ್ ಹಿಂಸಾತ್ಮಕ ಚಳವಳಿಯನ್ನು ಬೆಂಬಲಿಸಿಲ್ಲ: ಜಯನ್ ಮಲ್ಪೆ

ಕುಂದಾಪುರ, ಫೆ.5: ದಲಿತರಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದ ರತೆಗಳು ಬದುಕಿನಾಧಾರವಾಗಬೇಕೆಂಬ ತನ್ನ ನಾಲ್ಕು ದಶಕಗಳ ಹೋರಾಟದಲ್ಲಿ ಅಂಬೇಡ್ಕರ್ ಎಂದೂ ಹಿಂಸಾತ್ಮಕ ಚಳವಳಿಗೆ ಬೆಂಬಲ ನೀಡಿಲ್ಲ ಮತ್ತು ಪ್ರೋತ್ಸಾಹಿಸಿಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.
ಕುಂದಾಪುರದ ಆನಗಳ್ಳಿಯಲ್ಲಿ ರವಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ದಲಿತ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದಲಿತರಿಗೆ ಸ್ಫೂರ್ತಿ ನೀಡಿದ ನಾಸಿಕ್ ಕಾಳಾರಾಮ ದೇವಸ್ಥಾನ ಪ್ರವೇಶದ ಸಂದರ್ಭ, ಚೌಡರ್ ಕೆರೆ ನೀರುಮುಟ್ಟಿದ ವೇಳೆ, ದೇಶದ ಮೊದಲ ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ಧ ಕಾಜ್ರೋಳ್ಕರ್ ಜಯಗಳಿಸಿದಾಗ, ಪೂನಾ ಒಪ್ಪಂದದಲ್ಲಿ ವಿಫಲರಾದಾಗ ಹಾಗೂ ಹಿಂದೂ ಕೋಡ್ ಬಿಲ್ ಜಾರಿಯಾ ಗದ ಸಂದರ್ಭದಲ್ಲಿ ಆಗಲಿ ಅಂಬೇಡ್ಕರ್ ತನ್ನ ಬೆಂಬಲಿಗರನ್ನು ಎತ್ತಿಕಟ್ಟಿ ಹಿಂಸಾತ್ಮಕ ಚಳವಳಿ ನಡೆಸಿಲ್ಲ ಎಂದರು.
ದಲಿತ ನಾಯಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವಾಗ ಸರಕಾರಿ ಅಧಿಕಾರಿಗಳ ಹಕ್ಕಿಗೂ ಚ್ಯುತಿ ಬರಬಾರದೆಂದ ಕನಿಷ್ಟ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ದಲಿತ ಸಮಾಜಕ್ಕೆ ದಲಿತ ನಾಯಕರೇ ಶತ್ರುಗಳಾಗುತ್ತಾರೆ ಎಂದು ಅವರು ತಿಳಿಸಿದರು.
ಅಧಕ್ಷತೆಯನ್ನು ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೇಟ್ಟಿನಮನೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿ, ಜಿಪಂ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಆನಗಳ್ಳಿ ಗ್ರಾಪಂ ಉಪಾದ್ಯಕ್ಷೆ ಗೀತಾ, ದಸಂಸ ನಾಯಕ ವಾಸುದೇವ ಮುದೂರು, ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ, ನೌಕರ ಒಕ್ಕೂಟದ ಸಂಚಾಲಕ ವೆಂಕಪ್ಪಮಾಸ್ಟರ್, ತಾಪಂ ಸದಸ್ಯೆ ಸ್ವಪ್ನ ಮೊಗವೀರ, ದಲಿತ ಮುಖಂಡ ಚಂದ್ರ ಹಳಗೇರಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟೀಯ ಪವರ್ ಲಿಪ್ಟಿಂಗ್‌ನಲ್ಲಿ ಪದಕ ವಿಜೇತ ಜಾಕ್ಸನ್ ಡಿಸೋಜ ಆನಗಳ್ಳಿ ಅವರನ್ನು ಸನ್ಮಾನಿಸಲಾಯಿತು. ದಸಂಸ ಜಿಲ್ಲಾ ನಾಯಕ ಮಂಜುನಾಥ ಗಿಲಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಹರೀಶ್ ಸ್ವಾಗತಿಸಿದರು. ಸಂತೋಷ ಆನಗಳ್ಳಿ ವಂದಿಸಿದರು.







