ನಿರ್ವಸಿತ ಕೊರಗ ಕುಟುಂಬಗಳ ಮನೆ ಬಾಡಿಗೆ ವಿಳಂಬ: ಆರೋಪ
ಮಂಗಳೂರು,ಫೆ.5: ನಂತೂರು ಹೆದ್ದಾರಿ ನಿರ್ಮಾಣ ಪ್ರಕ್ರಿಯೆಯಲ್ಲಿ ಮನೆ ಮತ್ತು ಭೂಮಿ ಕಳೆದುಕೊಂಡ ಕೊರಗ ಕುಟುಂಬಗಳಿಗೆ ಕಳೆದ 22 ತಿಂಗಳ ಮನೆ ಬಾಡಿಗೆಯನ್ನು ನೀಡದೆ ಅನ್ಯಾಯ ಎಸಗಿದೆ ಎಂದು ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ನಿರ್ದೇಶನ ನೀಡಿದ ಬಳಿಕ 2010ರಿಂದ 2015ರವರೆಗೆ ಮನೆಬಾಡಿಗೆಯನ್ನು ಪಾವತಿಸಲಾಗಿತ್ತು. ಆ ಬಳಿಕ ಪಾವತಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಐಟಿಡಿಪಿ ಅಧಿಕಾರಿಗಳಿಗೆ ವಿನಂತಿಸಿದ್ದರೂ ಸ್ಪಂದಿಸಿಲ್ಲ. ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಒಂದು ತಿಂಗಳೊಳಗೆ ಬಾಡಿಗೆ ಹಣ ಪಾವತಿಸದಿದ್ದರೆ ಫೆ.27ರಂದು ಐಟಿಡಿಪಿ ಧರಣಿ ನಡೆಸಲು ನಿರ್ಧರಿಸಿದೆ ಎಂದು ರಾಜ್ಯ ಸಹ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ತಿಳಿಸಿದ್ದಾರೆ.
Next Story





