ದುಗ್ಗಲಡ್ಕದಲ್ಲಿ ಸುಳ್ಯ ತುಳು ಮಿನದನ ಸಂಭ್ರಮ

ಸುಳ್ಯ,ಫೆ.5: ತುಳುನಾಡ ಸಂಸ್ಕೃತಿಯ ಬೆಳವಣಿಗೆಗೆ ಸುಳ್ಯ ತಾಲೂಕಿನ ಕೊಡುಗೆ ಅಪಾರ. ನಿರಂತರ ಕಾರ್ಯಕ್ರಮಗಳ ಮೂಲಕ ತುಳು ನಾಡಿನ ವೈಭವವನ್ನು ಇಲ್ಲಿ ಜೀವಂತವಾಗಿ ಇಡಲಾಗುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ದುಗ್ಗಲಡ್ಕದ ಕುರಲ್ ತುಳುಕೂಟ ಮತ್ತು ಕೊಕುಳಿಯ ಮಿತ್ರ ಯುವಕ ಮಂಡಲಗಳ ಸಹಯೋಗದೊಂದಿಗೆ ನಡೆದ ಸುಳ್ಯ ತುಳು ಮಿನದನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾರಂಭವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಾಂಸ್ಕೃತಿಕ ಸಂಭ್ರಮವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಇಲ್ಲಿ ನಡೆಯುವ ತುಳು ಕಾರ್ಯಕ್ರಮಗಳನ್ನು ನೋಡಿದರೆ ಖಂಡಿತವಾಗಿಯೂ ತುಳು ಭಾಷೆ, ಸಂಸ್ಕೃತಿ ಅಳಿಯುವುದಿಲ್‌ಲ್ ಎಂಬ ವಿಶ್ವಾಸ ಮೂಡುತ್ತ್ದೆ. ಎಂದು ಅವರು ಹೇಳಿದರು.
ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಮ್ ವೆಂಕಪ್ಪ ಗೌಡ ಮುಖ್ಯ ಅತಿಥಿಗಳಾಗಿ ಮಾತನಾಡಿ ಗ್ರಾಮೀಣ ಪ್ರಧೇಶದಲ್ಲಿ ತುಳು ಸಂಸ್ಕೃತಿ ಉಳಿದಿದೆ. ಅದನ್ನು ವಿಸ್ತರಿಸಿವ ಕಾರ್ಯ ಮಾಡಬೇಕು ಎಂದು ಹೇಳಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನವನ್ನು ದೆಹಲಿಯಲ್ಲಿ ನಾವು ಹಿಂದಿನಿಂದಲೇ ಮಾಡುತ್ತಿದ್ದೇವೆ. ಕರ್ನಾಟಕದ ಮಂತ್ರಿಗಳು, ಶಾಸಕರು, ಸಂಸದರು ಒಗ್ಗಟ್ಟಾಗಿ ನಿಂತರೆ ಮಾತ್ರ ಈ ಪ್ರಯತ್ನದಲ್ಲಿ ಯಶಸ್ಸು ಲಭಿಸಬಹುದು ಎಂದು ಹೇಳಿದರು. ವೆಂಕಟರಮಣ ಕ್ರೆಡಿಟ್ ಕೊ-ಆಪರೇಟಿವ್ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಕಲ್ಮಡ್ಕ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಮಿತ್ರ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಎಂ.ಕೆ.ಪುರುಷೋತ್ತಮ ಗೌಡ ಮಾಣಿಬೆಟ್ಟು, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್,ಅರಂತೋಡು ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷ ಟಿ.ಎಂ.ಶಹೀದ್, ಅಮರ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜನಾರ್ದನ ಕುಂಟಿಕಾನ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪದ್ಮಶ್ರೆ ಪ್ರಶಸ್ತಿ ಪಡೆದ ಗಿರೀಶ್ ಭಾರದ್ವಾಜ್ ರನ್ನು ಸನ್ಮಾನಿಸಲಾಯಿತು. ತುಳು ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸದಸಯ ಸಂಚಾಲಕ ಕೆ.ಟಿ ವಿಶ್ವನಾಥ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ಕುರಲ್ ತಳು ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನೀರಬಿದಿರೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಬದಿಯಡ್ಕ ತುಳು ಒಕ್ಕೂಟದ ರಾಜೀಶ್ ಆಳ್ವ, ತುಳು ಅಕಾಡೆಮಿ ರಿಜಿಸ್ಡ್ರಾರ್ ಚಂದ್ರಹಾಸ ರೈ ಸದಸ್ಯರಾದ ಡಿ. ಎಮ. ಕುಲಾಲ್, ರೂಪಕಲಾ ಆಳ್ವ, ಕುರಲ್ ತುಳು ಕೂಟದ ಗೌರವಾಧ್ಯಕ್ಷ ಬಾಲಕೃಷ್ಣ ನಾಯರ್, ಅಧ್ಯಕ್ಷ ಸಿರಿಲ್ ಡಿಸೋಜ, ಮಿತ್ರ ಯುವಕ ಮಂಡಲದ ಅಧ್ಯಕ್ಷ ಆನಂದ ನೀರಬಿದಿರೆ. ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ರಜೀಶ್ ನೀರಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅನೇಕ ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರದರ್ಶನ ಗೊಂಡವು. ಗಾಯಕ ಶಿವಪ್ರಸಾದ್ ಆಲೆಟ್ಟಿಯವರಿಂದ ತುಳು ಪದ ಸಂಗೀತ, ಶಶಿ ಬ್ರದರ್ಸ್ ಕಲಾಕೇಂದ್ರದವರಿಂದ ನೃತ್ಯ ಕಾರ್ಯಕ್ರಮ ಮಂಗಳೂರಿನ ಚಕ್ರಪಾಣಿ ನೃತ್ಯಕೇಂದ್ರದವರಿಂದ ಅಮರ್ ಬೊಳ್ಳಿಲು ತುಳು ಸಾಂಸ್ಕೃತಿಕ ಕಾರ್ಯಕ್ರಮ, ದೇವಿದಾಸ್ ಕಾಪಿಕಾಡ್ ನಿರ್ದೇಶನದ ಪನಿಯರ ಆವಂದಿನ ನಾಟಕ, ಬೆಳ್ಳಾರೆ ಯಕ್ಷರಂಗದವರಿಂದ ನಾಗರಪಂಚಮಿ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.







