ನಿಷೇಧ ಹೊರತಾಗಿಯೂ ಅಮೆರಿಕ ಜೊತೆಗಿನ ಬಾಂಧವ್ಯ ವೃದ್ಧಿಸಲು ಮುಂದಾದ ಸುಡಾನ್

ಖಾರ್ತೂಮ್ (ಸುಡಾನ್), ಫೆ. 5: ತನ್ನ ದೇಶದ ನಾಗರಿಕರು ಅಮೆರಿಕ ಪ್ರವೇಶಿಸದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ವಿಧಿಸಿರುವ ಹೊರತಾಗಿಯೂ, ಅಮೆರಿಕದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ಸುಡಾನ್ ಶನಿವಾರ ನಿರ್ಧರಿಸಿದೆ.
ಸುಡಾನ್ ವಿರುದ್ಧ ಅಮೆರಿಕ ವಿಧಿಸಿದ್ದ 20 ವರ್ಷಗಳ ಹಳೆಯ ವ್ಯಾಪಾರ ದಿಗ್ಬಂಧನವನ್ನು ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ತೆರವುಗೊಳಿಸಿದ ಕೆಲವೇ ವಾರಗಳಲ್ಲಿ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶ ಜಾರಿಯಾಗಿದೆ.
‘‘ಸುಡಾನ್ ಮತ್ತು ಅಮೆರಿಕಗಳು ಹಲವು ಸಮಾನ ಗುರಿಗಳನ್ನು ಹೊಂದಿವೆ. ಅದರಲ್ಲಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡುವುದು ಸೇರಿದೆ’’ ಎಂದು ಅಮೆರಿಕದ ನೂತನ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್‌ರಿಗೆ ಕಳುಹಿಸಿದ ಸಂದೇಶವೊಂದರಲ್ಲಿ ಸುಡಾನ್ ವಿದೇಶ ಸಚಿವ ಇಬ್ರಾಹೀಮ್ ಘಂಡೌರ್ ಹೇಳಿದ್ದಾರೆ ಎಂದು ಸುಡಾನ್ ವಿದೇಶ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.
Next Story





