ಕೆ. ಗೋಪಾಲ ಶೆಣೈ

ಮೂಡುಬಿದಿರೆ,ಫೆ.5: ಮಂಗಳೂರಿನ ಅಳಕೆ ನಿವಾಸಿ ಕಾರ್ಕಳ ಮೂಲದ ಕೆ. ಗೋಪಾಲ ಶೆಣೈ (84ವ) ಕಳೆದ ಶನಿವಾರ ನಿಧನ ಹೊಂದಿದರು. ಮೊಗರ್ನಾಡಿನ ಶಾಲೆಯ ಸ್ಥಾಪಕ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಬೆಳ್ತಂಗಡಿಯ ಬಂಗಾಡಿಯಲ್ಲಿ ಆದರ್ಶ ಶಿಕ್ಷಕ, ಮುಖ್ಯೋಪಾಧ್ಯಾಯರೆನಿಸಿ ಜನಮನ್ನಣೆಗಳಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅಳಕೆಯ ಗೀತಾಜ್ಙಾನ ಮಂದಿರದ ಸತ್ಸಂಗದಲ್ಲಿ ಅವರುತಮ್ಮನ್ನು ತೊಡಗಿಸಿಕೊಂಡಿದ್ದರು.
Next Story





