ಆಳ್ವಾಸ್ ಹೆಲ್ತ್ ಸೆಂಟರ್ ಆಶ್ರಯದಲ್ಲಿ ಆರೋಗ್ಯ ತಪಾಸಣೆ, ಆಳ್ವಾಸ್ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ

ಮೂಡುಬಿದಿರೆ,ಫೆ.5: ಆಳ್ವಾಸ್ ಹೆಲ್ತ್ ಸೆಂಟರ್ ಆಶ್ರಯದಲ್ಲಿ, ಆಳ್ವಾಸ್ ಸಮಾಜ ಕಾರ್ಯ ವಿಭಾಗ ಹಾಗೂ ಮೂಡುಬಿದಿರೆ ಪುರಸಭಾ ಕಾರ್ಯಾಲಯದ ವತಿಯಿಂದ ಆಳ್ವಾಸ್ ತೃತೀಯ ಬಿಎಸ್‌ಡಬ್ಲ್ಯು ವಿದ್ಯಾರ್ಥಿನಿ ಕೃಪಾ ಕೈಲಾರ್ ಸಂಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಆಳ್ವಾಸ್ ಆರೋಗ್ಯ ಕಾರ್ಡ್‌ನ ಉಚಿತ ವಿತರಣಾ ಶಿಬಿರ ಮೂಡುಬಿದಿರೆ ಸ್ವರ್ಣ ವುಂದಿರದಲ್ಲಿ ಭಾನುವಾರ ನಡೆಯಿತು.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಡಾ. ಶ್ರುತಿ ಶರ್ಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ, ಇಡೀ ಕುಟುಂಬದ ಸರ್ವ ರೀತಿಯ ರಕ್ಷಣೆ ಮಾಡುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿವುದು ಕೂಡ ಮುಖ್ಯವಾಗುತ್ತದೆ. ಮುಟ್ಟಿನ ಸಮಸ್ಯೆ, ಸ್ತನ ಕ್ಯಾನ್ಸರ್‌ನಂತಹ ಸಮಸ್ಯೆಗಳ ಬಗ್ಗೆ ಅರಿವು, ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದರು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮಧುಮಾಲ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ.ವಿನಯ್ ಆಳ್ವ, ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೊ, ಸಮುದಾಯ ಸಂಘಟಕ ಮುರಳೀಧರ್, ಡಾ.ಪುನೀತ್ ಹೆಗ್ಡೆ, ಡಾ.ಅರ್ಜುನ್ ಬಲ್ಲಾಳ್, ಡಾ.ಹನಾ ಶೆಟ್ಟಿ, ಡಾ.ಸುಕೇಶ್ ಎ., ಡಾ.ಅಮರ ದೀಪ್ ಎಂ ಮುಖ್ಯ ಅತಿಥಿಯಾಗಿದ್ದರು. ಸಂಯೋಜಕಿ ಕೃಪಾ ಕೈಲಾರ್ ಉಪಸ್ಥಿತರಿದ್ದರು.
ಆಳ್ವಾಸ್ ತೃತೀಯ ಬಿವಿಎ ವಿದ್ಯಾರ್ಥಿ ಸಂದೀಪ ಆಚಾರ್ ಸ್ವಾಗತಿಸಿದರು. ಪವಿತ್ರ ವಂದಿಸಿದರು.
300 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
--





