ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಹಿರಿಯಡ್ಕ, ಫೆ.5: ಅನಾರೋಗ್ಯ ಹಾಗೂ ಕಾಲು ನೋವಿನಿಂದ ಬಳಲು ತಿದ್ದ ಹಿರಿಯಡ್ಕ ಸಮೀಪದ ಪಂಚನಬೆಟ್ಟು ನಿವಾಸಿ ರಾಮಣ್ಣ ಶೆಟ್ಟಿ(75) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.4ರಂದು ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಉಳ್ಳೂರು ಗ್ರಾಮದ ಕಾಕ್ತೋಟ ನಿವಾಸಿ ರವಿ ಶೆಟ್ಟಿ(45) ಎಂಬವರು ಕಿರಿಮಂಜೇಶ್ವರ ಗ್ರಾಮದ ಹಂದಟ್ಟುಬೆಟ್ಟಿನ ನಾಗರ ಬನದ ಬಳಿ ಫೆ.3ರಿಂದ 4ರ ಮಧ್ಯಾವಧಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





