ಇಬ್ರಾಹಿಂ ಹಾಜಿ ಕಲ್ಲೂರು ರವರಿಗೆ ಅಂತಾರಾಷ್ಟ್ರೀಯ ಲಯನ್ಸ್ ಎಂಜೆಎಫ್ ಪ್ರಶಸ್ತಿ

ಮಂಜೇಶ್ವರ,ಫೆ.5:ಇಲ್ಲಿನ ಸಾಮಾಜಿಕ ಸೇವಕರು ಹಾಗೂ ಶೈಕ್ಷಣಿಕ ಹಾಗೂ ಪ್ರೋತ್ಸಾಹಕರೂ ಆಗಿರುವ ಕಾರವಾರ ಲಯನ್ಸ್ ಕ್ಲಬ್ ಸದಸ್ಯರಾದ ಇಬ್ರಾಹಿಂ ಹಾಜಿ ಕಲ್ಲೂರು ರಿಗೆ ಅಂತಾರಾಷ್ಟ್ರೀಯ ಲಯನ್ಸ್ ಎಂಜೆಎಫ್ ಪ್ರಶಸ್ತಿ ಲಭಿಸಿದೆ.
ಗೋವಾ ರಾಜ್ಯದ ಪೋಡಾನಗರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿಸ ಅಸಾಧಾರಣ ಸೇವೆಗಾಗಿ ಇಬ್ರಾಹಿಂ ಹಾಜಿ ಕಲ್ಲೂರುರಿಗೆ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥಾಪಕರ ಭಾವಚಿತ್ರವಿರುವ ಪಾರಿತೋಷಕ ಹಾಗೂ ಪ್ರಮಾಣಪತ್ರವನ್ನು ನೀಡಲಾಯಿತು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಯನ್ಸ್ ಗವರ್ನರ್ ಎಂಜೆಎಫ್ ಹಿರೇಗೌಡರ್ ,ಉಪಗವರ್ನರ್ ಸಾಯಿಶ್ ಲಾವಂಡೆ,ಮೋನಿಕಾ ಸಾವಂತೆ ಹಾಗೂ ಮಾಜಿ ಗವರ್ನರ್ ಅಗ್ನೆಲೋ ಅಲೋಸೋಸ್ ಅವರು ಇಬ್ರಾಹಿಂ ಹಾಜಿಯವರ ಸಾಧನೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ನೂರಾರು ಪಧಾದಿಕರಿಗಳು ಬಾಗವಹಿಸಿದ್ದರು.ಕಾರವಾರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಹನೀಫ್ ಮುಲ್ಲಾ,ಮಾಜಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ,ಮಾಜಿ ರಿಜಿನಲ್ ಚೆಯರ್ ಮ್ಯಾನ್ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.





