ಚಿಕ್ಕಮಗಳೂರು: ಮದ್ಯ ಮಾರಾಟ ನಿಷೇಧ
ಚಿಕ್ಕಮಗಳೂರು, ಫೆೆ.5: ಮೂಡಿಗೆರೆ ತಾಲೂಕು ಪಟ್ಟಣದ ಶ್ರೀ ಕಳಸೇಶ್ವರ ಸ್ವಾಮಿಯ 2017ನೆ ಸಾಲಿನ ವಾರ್ಷಿಕ ರಥೋತ್ಸವ ಹಿನ್ನೆಲೆಯಲ್ಲಿ ಫೆ.8ರಂದು ಬೆಳಗ್ಗೆ 6 ಗಂಟೆಯಿಂದ ಫೆೆ.9ರ ಮಧ್ಯಾಹ್ನ 12 ಗಂಟೆಯವರೆಗೆ ಮೂಡಿಗೆರೆ ತಾಲೂಕು ಕಳಸ ಪಟ್ಟಣ ಹಾಗೂ ಸುತ್ತಮುತ್ತಲಿನ 10ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ನಮೂನೆಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಣೆ ಹಾಗೂ ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Next Story





