ಶಶಿಕಲಾರನ್ನು ಜನರು ಆಯ್ಕೆ ಮಾಡಿಲ್ಲ, ಆಕೆಗೆ ಅನುಭವವಿಲ್ಲ: ಡಿಎಂಕೆ
ಚೆನ್ನೈ,ಫೆ.5: ತಮಿಳುನಾಡಿನ ಎಡಿಎಂಕೆ ಮುಖ್ಯಮಂತ್ರಿಯಾಗಿ ವಿ.ಕೆ.ಶಶಿಕಲಾ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿರುವ ಡಿಎಂಕೆ ಪಕ್ಷವು, ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಅನುಭವವಿಲ್ಲದಿರುವವರನ್ನು ಮುಖ್ಯಮಂತ್ರಿ ಹುದ್ದೆಗೆ ಹೇಗೆ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಶ್ನಿಸಿದೆ.
ಜಯಲಲಿತಾ ನೇತೃತ್ವದ ಸರಕಾರಕ್ಕೆ ತಮಿಳುನಾಡಿನ ಜನರು ಮತ ನೀಡಿದ್ದರು. ಒ.ಪನ್ನೀರ್ ಸೆಲ್ವಂ ಅಥವಾ ಶಶಿಕಲಾ ಸೇರಿದಂತೆ ಅವರ ‘ಕುಟುಂಬ’ದ ಯಾರಾದರೂ ಮುಖ್ಯಮಂತ್ರಿಯಾಗಲು ತಮಿಳುನಾಡಿನ ಜನರು ಮತವನ್ನು ನೀಡಿರಲಿಲ್ಲ ಎಂದು ಡಿಎಂಕೆಯ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಈ ಮೊದಲು ಹೇಳಿದ್ದರು. ಶಶಿಕಲಾಗೆ ಯಾವುದೇ ಅನುಭವವಿಲ್ಲ. ಅವರು ಚುನಾಯಿತರೂ ಅಲ್ಲ. ಅವರ ನೀತಿಗಳು ಏನೆಂದೂ ಗೊತ್ತಿಲ್ಲ. ಅವರು ಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ ಎಂದು ಹಿರಿಯ ಡಿಎಂಕೆ ನಾಯಕರೋರ್ವರು ಪ್ರಶ್ನಿಸಿದರು.
Next Story





