ಟ್ರಂಪ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ..!
ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ವಿರೋಧಿಸಿ ಜನರು ಶನಿವಾರ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ ಪ್ಯಾರಿಸ್‌ನಲ್ಲೂ ಐಫೆಲ್ ಟವರ್ ಸಮೀಪದ ಟ್ರೊಕಡೆರೊ ಪ್ಲಾಝಾದಲ್ಲಿ ಜನರು ಶನಿವಾರ ಪ್ರತಿಭಟನೆ ನಡೆಸಿದರು. ‘ಮೆಕ್ ಅಮೆರಿಕ ಹೇಟ್ ಅಗೆನ್’ (ಅಮೆರಿಕ ಮತ್ತೆ ದ್ವೇಷಿಸುವಂತೆ ಮಾಡಿ)ಎಂಬ ಘೋಷಣಾಪತ್ರ ಎಲ್ಲರ ಗಮನ ಸೆಳೆಯಿತು.
Next Story





