ಇ. ಅಹ್ಮದ್‌ರಿಗೆ ಕಲಿಮಾ ಹೇಳಿ ಕೊಡಲು ಆಸ್ಪತ್ರೆಯಲ್ಲಿ ಅಡ್ಡಿ: ಮಕ್ಕಳ ಆರೋಪ

ಕಣ್ಣೂರು, ಫೆ.6: ಮಾಜಿ ಕೇಂದ್ರ ಸಚಿವ ಮುಸ್ಲಿಂ ಲೀಗ್ ಮುಖಂಡ ಇ. ಅಹ್ಮದ್ ಮರಣಶಯ್ಯೆಯಲ್ಲಿರುವಾಗ ಕಲಿಮಾ(ಧಾರ್ಮಿಕ ವಿಧಿಗೆ ಸಂಬಂಧಿಸಿದ ವಚನ) ಹೇಳಿಕೊಡದಂತೆ ಆಸ್ಪತ್ರೆಯ ವೈದ್ಯರು ಅಡ್ಡಿಪಡಿಸಿದ್ದಾರೆಂದು ಅವರ ಮಕ್ಕಳು ಬಹಿರಂಗಪಡಿಸಿದ್ದಾರೆ.
ಒಂದು ಹಂತದಲ್ಲಿ ಇ.ಅಹ್ಮದ್‌ರಿಗೆ ಅವರ ಕಾರ್ಯದರ್ಶಿ ಶಫೀಕ್ ಕಲಿಮಾ (ಸತ್ಯವಚನ) ಹೇಳಿಕೊಡುತ್ತಿದ್ದಾಗ ವೈದ್ಯರು ನಿಲ್ಲಿಸಿರಿ ಎಂದು ಸೂಚನೆ ನೀಡಿದ್ದಾರೆ ಎಂದು ಪುತ್ರ ನಸೀರ್ ಅಹ್ಮದ್ ತಿಳಿಸಿದ್ದಾರೆಂದು ವರದಿಯಾಗಿದೆ.
Next Story





