Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಇಂಗ್ಲೆಂಡ್ ಟೆಸ್ಟ್ ನಾಯಕತ್ವ ತ್ಯಜಿಸಿದ...

ಇಂಗ್ಲೆಂಡ್ ಟೆಸ್ಟ್ ನಾಯಕತ್ವ ತ್ಯಜಿಸಿದ ಕುಕ್

ವಾರ್ತಾಭಾರತಿವಾರ್ತಾಭಾರತಿ6 Feb 2017 6:28 PM IST
share
ಇಂಗ್ಲೆಂಡ್ ಟೆಸ್ಟ್ ನಾಯಕತ್ವ ತ್ಯಜಿಸಿದ ಕುಕ್

ಲಂಡನ್, ಫೆ.6: ಎಡಗೈ ಬ್ಯಾಟ್ಸ್‌ಮನ್ ಅಲಿಸ್ಟರ್ ಕುಕ್ ಸೋಮವಾರ ಇಂಗ್ಲೆಂಡ್ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದಾರೆ.

ದಾಖಲೆ 59 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಕುಕ್, ‘‘ನನಗಿದು ಬೇಸರದ ದಿನ ಆದರೆ, ತಂಡದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ’’ಎಂದು ಕುಕ್ ಹೇಳಿದ್ದಾರೆ.

ಕುಕ್ ರಾಜೀನಾಮೆಯಿಂದ ತೆರವಾಗಿರುವ ಟೆಸ್ಟ್ ನಾಯಕತ್ವಕ್ಕೆ ಯಾರ್ಕ್‌ಶೈರ್ ಬ್ಯಾಟ್ಸ್‌ಮನ್ ಜೋ ರೂಟ್ ಫೇವರಿಟ್ ಆಗಿದ್ದು, ಇಂಗ್ಲೆಂಡ್ ಮುಂದಿನ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿಗೆ ತಯಾರಿ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ನಾಯಕನ ಆಯ್ಕೆ ಬೇಗನೆ ನಡೆಯಬಹುದು.

  ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್(11,057 ರನ್) ಗಳಿಸಿರುವ ಕುಕ್ 2012ರ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ನಾಯಕನಾಗಿ ಆಯ್ಕೆಯಾಗಿದ್ದರು. 2013 ಹಾಗೂ 2015ರಲ್ಲಿ ತವರು ನೆಲದಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ತಂಡ ಸರಣಿ ಜಯಿಸಲು ಮುಖ್ಯಪಾತ್ರವಹಿಸಿದ್ದರು.

ಕುಕ್ ನಾಯಕತ್ವದಲ್ಲಿ ಆಂಗ್ಲರು 2015-16ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಐತಿಹಾಸಿಕ ಸರಣಿ ಜಯಿಸಿದ್ದರು. ಭಾರತದಲ್ಲಿ ನಾಯಕನಾಗಿ ಆಡಿರುವ ತನ್ನ ಮೊದಲ ಪ್ರವಾಸಿ ಸರಣಿಯಲ್ಲಿ ಇಂಗ್ಲೆಂಡ್‌ಗೆ ಭಾರತದಲ್ಲಿ 28 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲಲು ಕಾರಣರಾಗಿದ್ದರು. ಆ ಸರಣಿಯಲ್ಲಿ ಅವರು ಮೊದಲ ಮೂರು ಪಂದ್ಯಗಳಲ್ಲಿ ಶತಕವನ್ನು ಬಾರಿಸಿದ್ದರು.

 ‘‘ಇಂಗ್ಲೆಂಡ್‌ನ ನಾಯಕನಾಗಿ ಕಳೆದ ಐದು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿರುವುದು ನನ್ನ ಪಾಲಿಗೆ ಅತ್ಯಂತ ದೊಡ್ಡ ಗೌರವ. ನಾಯಕತ್ವ ತೊರೆಯುವುದು ಅತ್ಯಂತ ಕಷ್ಟಕರ ನಿರ್ಧಾರ. ಇದು ಸರಿಯಾದ ನಿರ್ಧಾರವೆಂದು ನನ್ನ ಭಾವನೆ. ಇದರಲ್ಲಿ ತಂಡದ ಹಿತದೃಷ್ಟಿಯೂ ಅಡಗಿದೆ. ತಾನು ಆಟಗಾರನಾಗಿ ಇನ್ನಷ್ಟು ವರ್ಷ ಆಡುವ ಉದ್ದೇಶವಿದೆ’’ ಎಂದು 32ರ ಪ್ರಾಯದ ಕುಕ್ ಹೇಳಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ತಂಡ ಭಾರತದ ಪ್ರವಾಸದ ವೇಳೆ ಭಾರತದ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ಸೋತಾಗಲೇ ಕುಕ್ ನಾಯಕತ್ವವನ್ನು ತೊರೆಯಬೇಕಾದ ಒತ್ತಡ ಎದುರಿಸುತ್ತಿದ್ದರು.

ಕುಕ್ ಉತ್ತರಾಧಿಕಾರಿ ಆಯ್ಕೆಗೆ ‘‘ಸರಿಯಾದ ಪ್ರಕ್ರಿಯೆ’’ ಆರಂಭವಾಗಿದೆ. ತಂಡ ಜುಲೈ ತನಕ ಟೆಸ್ಟ್ ಪಂದ್ಯ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ತಿಳಿಸಿದೆ.

ಕುಕ್ 2010 ಹಾಗೂ 2014ರ ನಡುವೆ 69 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿ ದಾಖಲೆ ನಿರ್ಮಿಸಿದ್ದ ಕುಕ್ ದೇಶದ ಪರ ಗರಿಷ್ಠ ಟೆಸ್ಟ್ ಆಡಿರುವ ಟೆಸ್ಟ್ ನಾಯಕನಾಗಿದ್ದು, ಗರಿಷ್ಠ ಟೆಸ್ಟ್ ಶತಕಗಳನ್ನು (30)ಸಿಡಿಸಿರುವ ಸಾಧನೆ ಮಾಡಿದ್ದಾರೆ. 2012ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದ ಅವರು 2013ರಲ್ಲಿ ಐಸಿಸಿ ವಿಶ್ವ ಟೆಸ್ಟ್ ನಾಯಕನೆಂಬ ಗೌರವಕ್ಕೆ ಪಾತ್ರರಾಗಿದ್ದರು.

 ಕುಕ್ ರವಿವಾರ ಇಸಿಬಿ ಚೇರ್‌ಮನ್ ಕಾಲಿನ್ ಗ್ರೆವೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಟೆಸ್ಟ್ ನಾಯಕನಾಗಿ ಕುಕ್ ಸಾಧನೆ

  24: ಇಂಗ್ಲೆಂಡ್ ತಂಡದ ಪರ 59 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿದ್ದ ಕುಕ್ 24 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮೈಕಲ್ ವಾನ್ ಬಳಿಕ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಎರಡನೆ ಯಶಸ್ವಿ ನಾಯಕನಾಗಿದ್ದಾರೆ. ವಾನ್ 26 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಕುಕ್ ನಾಯಕನಾಗಿ 22 ಪಂದ್ಯಗಳಲ್ಲಿ ಸೋತಿದ್ದಾರೆ.

 05: ವಿಶ್ವದ ಐವರು ಬ್ಯಾಟ್ಸ್‌ಮನ್‌ಗಳು ನಾಯಕರಾಗಿ ಕುಕ್‌ಗಿಂತ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ. ಕುಕ್ 111 ಇನಿಂಗ್ಸ್‌ಗಳಲ್ಲಿ 4,844 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನಾಯಕನಾಗಿ ಗರಿಷ್ಠ ರನ್, ಶತಕ ಹಾಗೂ ಅರ್ಧಶತಕ ದಾಖಲಿಸಿದ್ದಾರೆ.

16: ಕುಕ್ ತವರು ನೆಲದಲ್ಲಿ ನಾಯಕನಾಗಿ 28 ಪಂದ್ಯಗಳನ್ನು ಆಡಿದ್ದು, ಈ ಪೈಕಿ 16 ಪಂದ್ಯಗಳನ್ನು ಜಯಿಸಿದ್ದಾರೆ. ಸ್ಟ್ರಾಸ್(19) ಹಾಗೂ ವಾನ್(17) ಬಳಿಕ ಗರಿಷ್ಠ ಗೆಲುವು ಸಾಧಿಸಿದ 3ನೆ ನಾಯಕನಾಗಿದ್ದಾರೆ.

06: ಕುಕ್ ಏಷ್ಯಾದಲ್ಲಿ ಆರು ಟೆಸ್ಟ್ ಶತಕ ಬಾರಿಸಿದ್ದು,ಇದು ಪ್ರವಾಸಿ ತಂಡದ ನಾಯಕನ ಶ್ರೇಷ್ಠ ಸಾಧನೆಯಾಗಿದೆ. ಉಪ ಖಂಡದಲ್ಲಿ ಆಡಿರುವ ಪ್ರವಾಸಿ ನಾಯಕರ ಪೈಕಿ ಕುಕ್ ಎರಡನೆ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಕುಕ್ 1,362 ರನ್ ಗಳಿಸಿದ್ದಾರೆ.

03: ಕುಕ್ 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ನಾಯಕನಾಗಿ 3 ಶತಕಗಳನ್ನು ಬಾರಿಸಿದ್ದರು. ಒಂದೇ ಸರಣಿಯಲ್ಲಿ 3 ಶತಕ ಬಾರಿಸಿದ ಇಂಗ್ಲೆಂಡ್‌ನ ಐವರು ನಾಯಕರ ಪೈಕಿ ಕುಕ್ ಒಬ್ಬರಾಗಿದ್ದಾರೆ. 2012ರಲ್ಲಿ ಭಾರತದ ವಿರುದ್ಧ 562 ರನ್ ಗಳಿಸಿದ್ದ ಅವರು ಇಂಗ್ಲೆಂಡ್ ತಂಡ ಭಾರತದ ವಿರುದ್ಧ 28 ವರ್ಷಗಳ ಬಳಿಕ ಸರಣಿ ಜಯಿಸಲು ನೆರವಾಗಿದ್ದರು.

01: ವಿಶ್ವದ ಐದು ತಂಡಗಳ ವಿರುದ್ಧ 50 ಹಾಗೂ ಅದಕ್ಕಿಂತ ಹೆಚ್ಚು ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ವಿಶ್ವದ ಏಕೈಕ ಟೆಸ್ಟ್ ನಾಯಕ ಕುಕ್. ಕುಕ್ ಬಾಂಗ್ಲಾದೇಶ, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ರಿಕಿ ಪಾಂಟಿಂಗ್, ಆ್ಯಂಜೆಲೊ ಮ್ಯಾಥ್ಯೂಸ್, ಅಲನ್ ಬಾರ್ಡರ್ ಹಾಗೂ ಮಿಸ್ಬಾವುಲ್ ಹಕ್ ನಾಲ್ಕು ಎದುರಾಳಿಯ ವಿರುದ್ಧ 50ಕ್ಕೂ ಅಧಿಕ ಸರಾಸರಿ ಕಾಯ್ದುಕೊಂಡಿದ್ದರು.

 05: ಕುಕ್ ನಾಯಕನಾಗಿ ಆಡಿರುವ ಮೊದಲ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ವಿಶ್ವದ ಯಾವೊಬ್ಬ ನಾಯಕನೂ ಈ ಸಾಧನೆ ಮಾಡಿಲ್ಲ. 2009-10ರಲ್ಲಿ ಬಾಂಗ್ಲಾ ವಿರುದ್ಧ 173, ಅಜೇಯ 109 ರನ್ ಗಳಿಸಿದ್ದರೆ, 2012-13ರಲ್ಲಿ ಭಾರತದ ವಿರುದ್ಧ 176, 122 ಹಾಗೂ 190 ರನ್ ಗಳಿಸಿದ್ದರು.

23: ಭಾರತ ವಿರುದ್ಧ 2012ರಲ್ಲಿ ನಡೆದ ಟೆಸ್ಟ್‌ನಲ್ಲಿ 23ನೆ ಶತಕ ಬಾರಿಸಿದ ಕುಕ್ ಇಂಗ್ಲೆಂಡ್‌ನ ಪರ ಗರಿಷ್ಠ ಶತಕ ಬಾರಿಸಿದ ಸಾಧನೆ ಮಾಡಿದರು. 7,000ಕ್ಕೂ ಅಧಿಕ ರನ್ ಗಳಿಸಿದ ಯುವ ಆಟಗಾರ ಎನಿಸಿಕೊಂಡರು. 12: ಮೇ 2016ರಲ್ಲಿ ಟೆಸ್ಟ್‌ನಲ್ಲಿ 10,000 ರನ್ ಪೂರೈಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್, ವಿಶ್ವದ 12ನೆ ಆಟಗಾರ ಎನಿಸಿಕೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X