ಮಣಿಪುರ: ಇಬೋಬಿ ವಿರುದ್ಧ ಇರೋಮ್ ಕಣಕ್ಕೆ

ಇಂಫಾಲ್,ಫೆ.6: ಮುಂದಿನ ತಿಂಗಳು ಚುನಾವಣೆಯನ್ನೆದುರಿಸಲಿರುವ ಮಣಿಪುರದಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಓಕ್ರಂ ಇಬೋಬಿ ಸಿಂಗ್ ವಿರುದ್ಧ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಸ್ಪರ್ಧಿಸಲಿದ್ದಾರೆ. ಶರ್ಮಿಳಾ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು, ಅವರ ಪಕ್ಷವಾದ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟೀಸ್ ಅಲಾಯನ್ಸ್ (ಪಿಆರ್‌ಜೆಎ)ನ ಸಂಚಾಲಕ ಎರೆಂಡ್ರೊ ಲಿಕೊನ್‌ಬಾಮ್ ತಿಳಿಸಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ರದ್ದತಿಗಾಗಿ 16 ವರ್ಷಗಳ ಕಾಲ ನಿರಶನ ನಡೆಸಿ, ರಾಷ್ಟಮಟ್ಟದಲ್ಲಿ ಗಮನಸೆಳೆದ ಶರ್ಮಿಳಾ, ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮಣಿಪುರದಲ್ಲಿ ಇಬೋಬಿ ನೇತ್ವದ ಕಾಂಗ್ರೆಸ್ ಸರಕಾರವು ಸತತ ಮೂರು ಅವಧಿಗಳಿಂದ ಅಧಿಕಾರದಲ್ಲಿದೆ. ಮಣಿಪುರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಫೆಬ್ರವರಿ 3ರಂದು 60 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಮುಖ್ಯಮಂತ್ರಿ ಒಬೋಬಿ ಅವರು ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
‘ಉಕ್ಕಿನ ಮಹಿಳೆ’ಯೆಂದೇ ಖ್ಯಾತರಾಗಿರುವ 44 ವರ್ಷ ವಯಸ್ಸಿನ ಇರೋಮ್ ಅವರು ಕಳೆದ ವರ್ಷದ ಆಗಸ್ಟ್‌ನಲ್ಲಿ ತನ್ನ 16 ವರ್ಷಗಳ ಉಪವಾಸ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಜಗತ್ತಿನ ಅತ್ಯಂತ ದೀರ್ಘಾವಧಿಯ ನಿರಶನವೆಂದೇ ಅದು ದಾಖಲೆಯನ್ನು ನಿರ್ಮಿಸಿತ್ತು. ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ,ಅವರು ನಿರಶನವನ್ನು ಕೈಗೊಂಡಿದ್ದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಪಿಆರ್‌ಜೆಎ ಪಕ್ಷವನ್ನು ಸ್ಥಾಪಿಸಿದ ಸಂದರ್ಭದಲ್ಲಿ ಶರ್ಮಿಳಾ ಅವರು, ವಿಧಾನಸಭಾ ಚುನಾವಣೆಯಲ್ಲಿ ತೌಬಾಲ್ ಹಾಗೂ ಖುರಾಯ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಶರ್ಮಿಳಾ ಅವರು ಖುರಾಯ್‌ನವರಾಗಿದ್ದರೆ,, ತೌಬಾಲ್ ಇಬೋಬಿ ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರವಾಗಿದೆ.
ಶರ್ಮಿಳಾ ಪರವಾಗಿ ಪಿಆರ್‌ಜೆಎ ತೌಬಾಲ್‌ನಲ್ಲಿ ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಿರುವುದಾಗಿ ಪಕ್ಷದ ಸಂಚಾಲಕ ಲಿಚೆನೊಬಾಮ್ ತಿಳಿಸಿದ್ದಾರೆ. ಆದಾಗ್ಯೂ, ಶರ್ಮಿಳಾ ಖುರಾಯ್ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷವು ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಪಿಆರ್‌ಜೆಎಗೆ ‘ಸೀಟಿ (ವಿಶಲ್)’ ಯ್ನು ಚುನಾವಣಾ ಚಿಹ್ನೆಯಾಗಿ ನೀಡಲಾಗಿದೆ. ಮಾರ್ಚ್ 4 ಹಾಗೂ 8ರಂದು ನಡೆಯಲಿರುವ ಮಣಿಪುರ ವಿಧಾನಭಾಚನಾಣೆಗೆ ಪಕ್ಷವು ಇರೋಮ್ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಯೆಂದು ಲಿಚೊನ್‌ಬಾಮ್ ತಿಳಿಸಿದ್ದಾರೆ.







