Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್‌ರ ಪುಟಿನ್ ಓಲೈಕೆಗೆ...

ಟ್ರಂಪ್‌ರ ಪುಟಿನ್ ಓಲೈಕೆಗೆ ಸ್ವಪಕ್ಷೀಯರಿಂದಲೇ ಖಂಡನೆ

ವಾರ್ತಾಭಾರತಿವಾರ್ತಾಭಾರತಿ6 Feb 2017 8:47 PM IST
share
ಟ್ರಂಪ್‌ರ ಪುಟಿನ್ ಓಲೈಕೆಗೆ ಸ್ವಪಕ್ಷೀಯರಿಂದಲೇ ಖಂಡನೆ

ಪಾಮ್ ಬೀಚ್ (ಅಮೆರಿಕ), ಫೆ. 6: ರಶ್ಯದ ಬಗ್ಗೆ ತಾನು ತಳೆದಿರುವ ಮೆದು ಧೋರಣೆಯನ್ನು ಸಮರ್ಥಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನದೇ ರಿಪಬ್ಲಿಕನ್ ಪಕ್ಷೀಯರಿಂದ ಹಾಗೂ ಎದುರಾಳಿ ಡೆಮಾಕ್ರಟಿಕ್ ಪಕ್ಷೀಯರಿಂದಲೂ ಟೀಕೆಗೊಳಗಾಗಿದ್ದಾರೆ.

ರಶ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳು ಮತ್ತು ಯುಕ್ರೇನ್ ಮೇಲೆ ರಶ್ಯ ನಡೆಸಿದ ಆಕ್ರಮಣವನ್ನು ಸಾಮಾನ್ಯ ವಿಚಾರವೆಂಬಂತೆ ಟ್ರಂಪ್ ಭಾವಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರಶ್ಯದ ಅಧ್ಯಕ್ಷ ವ್ಲಾದಿಮರ್ ಪುಟಿನ್‌ರಿಂದ ಅಂತರ ಕಾಯ್ದುಕೊಳ್ಳಿ ಎಂಬುದಾಗಿ ತನ್ನದೇ ರಿಪಬ್ಲಿಕನ್ ಪಕ್ಷದ ನಾಯಕತ್ವದಿಂದ ಸೂಚನೆಗಳು ಬರುತ್ತಿದ್ದರೂ, ಟ್ರಂಪ್ ಕಡೆಗಣಿಸಿದ್ದಾರೆ. ಅಧಿಕಾರ ವಹಿಸಿಕೊಂಡು ಎರಡು ವಾರಗಳಷ್ಟೇ ಆಗಿರುವ ಟ್ರಂಪ್ ಈ ಮೂಲಕ ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

‘‘ನಾನು ಅವರನ್ನು ಗೌರವಿಸುತ್ತೇನೆ. ಹೌದು, ನಾನು ತುಂಬಾ ಜನರನ್ನು ಗೌರವಿಸುತ್ತೇನೆ. ಆದರೆ, ಅದರ ಅರ್ಥ ನಾನು ಅವರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದೇನೆ ಎನ್ನುವುದಲ್ಲ’’ ಎಂದು ‘ಫಾಕ್ಸ್ ನ್ಯೂಸ್’ನ ಬಿಲ್ ಒ’ರೀಲಿ ಅವರಿಗೆ ನೀಡಿರುವ ‘ಸೂಪರ್ ಬೌಲ್’ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ. ಸಂದರ್ಶನದ ಪೂರ್ಣ ಭಾಗವು ರವಿವಾರ ಪ್ರಸಾರಗೊಳ್ಳಲಿದೆ.

ಕೊಲೆಗಡುಕರು ಬೇಕಾದಷ್ಟು ಮಂದಿ ಇದ್ದಾರೆ!

ನಾವೇನು ಅಷ್ಟೊಂದು ಅಮಾಯಕರಾ?

ಟ್ರಂಪ್ ಉವಾಚ

ಪತ್ರಕರ್ತರು ಮತ್ತು ಭಿನ್ನಮತೀಯರ ನ್ಯಾಯಾಂಗೇತರ ಹತ್ಯೆಗಳಲ್ಲಿ ಪುಟಿನ್ ಶಾಮೀಲಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ಅಂಥ ಕೊಲೆಗಡುಕರು ತುಂಬಾ ಮಂದಿ ಇದ್ದಾರೆ. ನಮ್ಮಲ್ಲಿ ತುಂಬಾ ಮಂದಿ ಕೊಲೆಗಡುಕರಿದ್ದಾರೆ’’ ಎಂದು ಟ್ರಂಪ್ ನುಡಿದರು.

‘‘ನಮ್ಮ ದೇಶ ಅಷ್ಟೊಂದು ಅಮಾಯಕ ಎಂಬುದಾಗಿ ನೀವು ಭಾವಿಸಿದ್ದೀರಾ?’’ ಎಂಬ ಮರು ಪ್ರಶ್ನೆಯನ್ನು ಟ್ರಂಪ್ ಕೇಳಿದರು.

‘‘ರಶ್ಯನ್ನರು ಮತ್ತು ಅಮೆರಿಕನ್ನರ ವಿಧಾನಗಳು ಒಂದೇ ಎಂದು ನನಗನಿಸುವುದಿಲ್ಲ’’ ಎಂದು ರಿಪಬ್ಲಿಕನ್ ಪಕ್ಷದವರೇ ಆದ ಮಿಚ್ ಮೆಕಾನೆಲ್ ಸಿಎನ್‌ಎನ್‌ಗೆ ಹೇಳಿದ್ದಾರೆ.

‘‘ಅವರೊಬ್ಬ ಮಾಜಿ ಕೆಜಿಬಿ (ರಶ್ಯದ ಗುಪ್ತಚರ ಸಂಸ್ಥೆ) ಏಜಂಟ್, ಓರ್ವ ವಂಚಕ. ಅವರು ಗೆದ್ದಿರುವ ಚುನಾವಣೆಗಳು ವಿಶ್ವಾಸಾರ್ಹ ಎಂಬುದಾಗಿ ಹೆಚ್ಚಿನವರು ಭಾವಿಸುವುದಿಲ್ಲ’’ ಎಂದರು.

ಫಾಕ್ಸ್ ನ್ಯೂಸ್ ಕ್ಷಮೆ ಕೋರಬೇಕು: ರಶ್ಯ

ಡೊನಾಲ್ಡ್ ಟ್ರಂಪ್ ಜೊತೆಗಿನ ಸಂದರ್ಶನದಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಬಗ್ಗೆ ಸಂದರ್ಶಕರು ಆಡಿದ ಮಾತುಗಳು ‘ಅಸ್ವೀಕಾರಾರ್ಹ’ವಾಗಿವೆ ಎಂದು ಸೋಮವಾರ ಹೇಳಿರುವ ರಶ್ಯ, ಇದಕ್ಕಾಗಿ ಟಿವಿ ಚಾನೆಲ್ ‘ಫಾಕ್ಸ್ ನ್ಯೂಸ್’ ಕ್ಷಮೆ ಕೋರಬೇಕೆಂದು ಒತ್ತಾಯಿಸಿದೆ.

ಪುಟಿನ್ ಓರ್ವ ‘ಕೊಲೆಗಡುಕ’ರಾಗಿದ್ದು, ಅಮೆರಿಕದ ಅಧ್ಯಕ್ಷರು ಯಾಕೆ ಅವರನ್ನು ಗೌರವಿಸುತ್ತಾರೆ ಎಂಬ ಪ್ರಶ್ನೆಯನ್ನು ‘ಫಾಕ್ಸ್ ನ್ಯೂಸ್’ನ ನಿರೂಪಕ ಬಿಲ್ ಒ’ರೀಲಿ ಕೇಳಿದ್ದರು.

‘‘ಫಾಕ್ಸ್ ಟಿವಿ ಕಂಪೆನಿ ಆಡಿರುವ ಮಾತುಗಳು ಅಸ್ವೀಕಾರಾರ್ಹ ಹಾಗೂ ಅವಮಾನಕರ ಎಂಬುದಾಗಿ ನಾವು ಭಾವಿಸಿದ್ದೇವೆ. ಇಂಥ ಪ್ರತಿಷ್ಠಿತ ಟಿವಿ ಕಂಪೆನಿ ಕ್ಷಮೆ ಕೋರಬೇಕೆಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ’’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X