ರೈಲಿನಡಿಗೆ ಹಾರಿ ಮೃತ್ಯು
ಮಣಿಪಾಲ, ಫೆ.6: ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪ ಫೆ.5ರಂದು ಸಂಜೆ 4:35ರ ಸುಮಾರಿಗೆ ಯುವಕನೋರ್ವ ರೈಲಿನಡಿಗೆ ಹಾರಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಜಾರ್ಖಂಡ್ ರಾಜ್ಯದ ಕುಮಾರ್ ಗೌರವ್ ಝಾ(30) ಎಂದು ಗುರುತಿಸಲಾಗಿದೆ. ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಕುಳಿತಿದ್ದ ಇವರು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಮತ್ಸಗಂಧ ರೈಲಿನಡಿಗೆ ಹಾರಿದನು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





