ತುಳು ಸಂಸ್ಕೃತಿಯ ತಿಳುವಳಿಕೆ ಯುವ ಜನಾಂಗಕ್ಕೆ ದಾಟಿಸಿ

ಉಡುಪಿ, ಫೆ.6: ತುಳುನಾಡಿನ ಸಂಪ್ರದಾಯದ ವಿಚಾರಕ್ಕೆ ಇಂತಹುವುದೇ ಎಂಬ ಲಿಖಿತ ಗ್ರಂಥಗಳಿಲ್ಲ. ಆದ್ದರಿಂದ ನಮ್ಮ ಸಂಸ್ಕೃತಿಯ ತಿಳುವಳಿಕೆ ಉಳ್ಳ ಹಿರಿಯರು ಅವುಗಳನ್ನು ಈಗಿ ಯುವ ಜನಾಂಗಕ್ಕೆ ತಿಳಿಸಿಹೇಳುವ ಕೆಲಸ ಮಾಡಬೇಕು ಎಂದು ಮಂಗಳೂರು ವಿವಿ ಅಧ್ಯಾಪಕ ಡಾ.ಬಿ.ಶಿವರಾಮ ಶೆಟ್ಟಿ ಹೇಳಿದ್ದಾರೆ.
ಉಡುಪಿ ಚಿಟ್ಪಾಡಿಯ ಕೃಷ್ಣ ಶೆಟ್ಟಿ ಇವರ ಮನೆಯಲ್ಲಿ ರವಿವಾರ ನಡೆದ ಉಡುಪಿ ಸಿರಿ ತುಳುವ ಚಾವಡಿಯ ತುಳುನಾಡ ಸಂಸ್ಕೃತಿ ಮತ್ತು ಐವದ ಐಸಿರಿ ಗೌರವ ಮತ್ತು ತುಳುವ ಸಿರಿ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಇಂದು ವೇಗವಾಗಿ ಸಾಗುತ್ತಿರುವ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಅನ್ಯ ಸಂಸ್ಕೃತಿ ದಾಳಿ ಇಡದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ತುಳುವರಿಗೆ ಇದೆ ಎಂದವರು ಹೇಳಿದರು. ಸಿರಿ ತುಳುವ ಚಾವಡಿ ಒಡಿಪು 50 ಕಡೆಗಳಲ್ಲಿ, ಐವರು ಮನೆಗಳಲ್ಲಿ ಮುಂದಿಲ್ದ ಕೂಟ ನಡೆಸಿ ಇದೀಗ ಐವದ ಐಸಿರಿಯನ್ನು ನಡೆಸುತ್ತಿರುವ ಸಿರಿ ತುಳುವ ಚಾವಡಿಯ ಕಾರ್ಯವನ್ನು ಪ್ರಶಂಸಿಸಿದರು.
ಸಮಾರಂಭದಲ್ಲಿ ಕಳೆದ 62 ವರ್ಷಗಳಿಂದ ಮೀನು ಮಾರಿಕೊಂಡು ಜೀವನ ನಡೆಸುತ್ತಿರುವ 72ರ ಪ್ರಾಯದಲ್ಲೂ ತನ್ನ ಉದ್ಯೋಗ ಮುಂದುವರಿಸಿರುವ ತುಕ್ರಕ್ಕೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಡಾ.ಗಣನಾಥ ಎಕ್ಕಾರ್, ಕೆ.ಎಲ್.ಕುಂಡಂತಾಯ ಹಾಗೂ ಎಸ್.ಎ. ಕೃಷ್ಣಯ್ಯ ಇವುಗಳಿಗೆ ತುಳುವ ಸಿರಿ ಗೌರವ ನೀಡಿ ಸನ್ಮಾನಿಸಲಾಯಿತು.
ಅಧ್ಯಾಪಕ ಕುದಿ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶ್ರೀಕಾಂತ ಶೆಟ್ಟಿ, ಕಿಶೋರ್ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಪ್ರಸಾದ್ ಶೆಟ್ಟಿ ಒರ್ವಾಡಿ, ಈಶ್ವರ ಶೆಟ್ಟಿ ಚಿಚ್ಪಾಡಿ, ನಿಟ್ಟೂರು ಮಹಾಬಲ ಶೆಟ್ಟಿ, ಸಂಜೀವ ಶೆಟ್ಟಿ, ಕೃಷ್ಣ ಶೆಟ್ಟಿ, ಶಿಲ್ಪಾ ಎಸ್.ಶೆಟ್ಟಿ ಹಾಗೂ ಶೋಬಿತ್ ಶೆಟ್ಟಿ ಉಪಸ್ಥಿತರಿದ್ದರು.
ಜಯಶಂಕರ್ ಸ್ವಾಗತಿಸಿ, ಅರ್ಪಿತಾ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಿಕೇತನ ವಂದಿಸಿದರು. ತುಳುನಾಡ ಜಾನಪದ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು







