ಭೂಕಂಪಕ್ಕೆ ಉತ್ತರಭಾರತ ತತ್ತರ
ಹೊಸದಿಲ್ಲಿ, ಫೆ.6: ಉತ್ತರಾಖಂಡ ಸೇರಿದಂತೆ ಉತ್ತರಭಾರತದ ವಿವಿಧೆಡೆ ಸೋಮವಾರ ರಾತ್ರಿ 10:33ರ ವೇಳೆಗೆ 5.8 ರಿಕ್ಟರ್‌ಸ್ಕೇಲ್ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ರಾಜಧಾನಿ ದಿಲ್ಲಿ,ಹರ್ಯಾಣ, ಪಂಜಾಬ್ ಸೇರಿದಂತೆ ಉತ್ತರಭಾರತದ ವಿವಿಧೆಡೆ ಭೂಮಿ ನಡುಗಿದ ಅನುಭವವಾಗಿದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿತ್ತೆಂದು ಅದು ಹೇಳಿದೆ. ಭೂಕಂಪದಿಂದ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ. ಕೆಲವು ಸ್ಥಳಗಳಲ್ಲಿ ಭೂಮಿ ಸುಮಾರು 30 ಸೆಕೆಂಡ್‌ಗಳವರೆಗೂ ಕಂಪಿಸಿದ್ದಾಗಿ ವರದಿಗಳು ಬಂದಿವೆ.
Next Story





