ಫೆ.8-11: ‘ಆರ್ಟಿಕಲ್-19’ ಫೆಸ್ಟ್
ಉಡುಪಿ, ಫೆ.6: ಮಣಿಪಾಲದ ಸ್ಕೂಲ್ ಆ್ ಕಮ್ಯುನಿಕೇಷನ್ ವತಿಯಿಂದ ‘ಆರ್ಟಿಕಲ್-19’ ೆಸ್ಟನ್ನು ೆ.8ರಿಂದ 11ರವರೆಗೆ ಎಸ್‌ಒಸಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ೆ.8ರಂದು ಬೆಳಗ್ಗೆ 10ಕ್ಕೆ ರಾಷ್ಟ್ರೀಯ ಸಾಯಿ ಕರ್ಮಚಾರಿ ಆಂದೋಲನದ ಸಂಚಾಲಕ, ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಬೆಝ್‌ವಾಡ ವಿಲ್ಸನ್ ಉದ್ಘಾಟಿಸಲಿದ್ದು, ಅಪರಾಹ್ನ 2ಕ್ಕೆ ದೇಶದ ಪ್ರಥಮ ಡ್ರಾಗ್ ಕ್ವೀನ್ ಅಲೆಕ್ಸ್ ಮ್ಯಾಥ್ಯೂ ಉಪನ್ಯಾಸ ನೀಡಲಿದ್ದಾರೆ ಎಂದು ಸ್ಕೂಲ್‌ನ ಪ್ರಭಾರ ನಿರ್ದೇಶಕಿ ಎಚ್.ಎಸ್.ಶುಭಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ೆ.9ರಂದು ಬೆಳಗ್ಗೆ 10ಕ್ಕೆ ಟ್ಯಾಟೂ ಕಲಾವಿದ ಮೊನಾಗ, ಮಧ್ಯಾಹ್ನ 2ಕ್ಕೆ ಬಿಬಿಸಿಯ ಪತ್ರಕರ್ತ ಸಮೀರ್ ಹಶ್ಮಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ೆ.10ರಂದು ವನ್ಯಜೀವಿ ಛಾಯಾಚಿತ್ರಗ್ರಾಹಕ ಶ್ರೀಪಾದ್ ಶ್ರೀಧರ್ ಡಿಎಸ್‌ಎಲ್‌ಆರ್ ಸಿನೆಮಾಟೋಗ್ರಫಿ ಕುರಿತು, ೆ.11ರಂದು ಬೆಳಗ್ಗೆ 10ಕ್ಕೆ ಬರಹಗಾರ್ತಿ ಪ್ರತಿಮಾ ನಾಯರ್ ಕಥೆ ಬರೆಯುವ ಮತ್ತು ಮಧ್ಯಾಹ್ನ 2ಕ್ಕೆ ಕಮ್ಯುನಲಿಸಂ ಕಂಬ್ಯಾಟ್‌ನ ಮಾಜಿ ಸಂಪಾದಕ ಜಾವೇದ್ ಆನಂದ್ ಪತ್ರಿಕೋದ್ಯಮ ಕುರಿತ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕಿ ಶ್ರುತಿ ಶೆಟ್ಟಿ, ಕಾರ್ಯಕ್ರಮ ಸಂಘಟಕ ರಾದ ಕಾರ್ತಿಕ್ ರಾಜಗೋಪಾಲ್, ಮಾಳವಿಕ ಮೆನನ್ ಮತ್ತಿತರರು ಉಪಸ್ಥಿತರಿದ್ದರು.







