Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಟಿಎಂಗಳಲ್ಲಿ ಇನ್ನೂ ಕೇವಲ ರೂ. 2000ದ...

ಎಟಿಎಂಗಳಲ್ಲಿ ಇನ್ನೂ ಕೇವಲ ರೂ. 2000ದ ನೋಟುಗಳು!

-ಆರ್. ಬಿ. ಶೇಣವ, ಮಂಗಳೂರು-ಆರ್. ಬಿ. ಶೇಣವ, ಮಂಗಳೂರು6 Feb 2017 11:58 PM IST
share

ಮಾನ್ಯರೆ,

 ಮೊನ್ನೆ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ‘‘ರೀ-ಮಾನಿಟೈಜೇಶನ್ ಕೆಲಸ ಪೂರ್ಣವಾಗಿದೆ. ಈಗ ಹೊಸ ನೋಟುಗಳ ಕೊರತೆ ಇಲ್ಲ’’ ಎಂದು ಹೇಳಿಕೆ ಕೊಟ್ಟಿದ್ದಾರೆ. ‘ರೀ-ಮಾನಿಟೈಜೇಶನ್’ ಅಂದರೆ ‘ನೋಟು ಅಮಾನ್ಯ’ದ ಮೂಲಕ ಚಲಾವಣೆಯಿಂದ ರದ್ದು ಮಾಡಿದ ಮೌಲ್ಯದಷ್ಟೇ ಮೊತ್ತವನ್ನು ಹೊಸ ನೋಟುಗಳ ಮೂಲಕ ಚಲಾವಣೆಗೆ ತರುವುದು. ಹಾಗಾದರೆ ಜನರಿಗೆ ಈಗಲೂ ಬೇಕಾದಷ್ಟು ವಿವಿಧ ಮುಖಬೆಲೆಯ ನೋಟುಗಳು ಎಟಿಎಂ ಅಥವಾ ಬ್ಯಾಂಕುಗಳಲ್ಲಿ ಯಾಕೆ ಸಿಗುತ್ತಿಲ್ಲ? ಹಿಂದೆಲ್ಲಾ ಶೇ. 90 ಎಟಿಎಂಗಳಲ್ಲಿ ಐನೂರರ ನೋಟುಗಳೇ ಸಿಗುತ್ತಿದ್ದವು, ಆದರೆ ಈಗ ಶೇ. 90 ಎಟಿಎಂಗಳಲ್ಲಿ ಕೇವಲ ರೂ. 2000ದ ನೋಟುಗಳು ಮಾತ್ರ ಸಿಗುತ್ತಿವೆ. ಯಾಕೆಂದರೆ ಬ್ಯಾಂಕಿನವರು ಐನೂರರ ನೋಟುಗಳನ್ನು ಎಟಿಎಂಗಳಲ್ಲಿ ಹಾಕುತ್ತಲೇ ಇಲ್ಲ. ಅದಕ್ಕೆ ಕಾರಣ ಈಗ ಹೊಸದಾಗಿ ಬಂದಿರುವ ಐನೂರರ ನೋಟುಗಳು ಹಳೆಯ ಐನೂರರ ನೋಟುಗಳಿಗಿಂತ ಆಕಾರದಲ್ಲಿ ಚಿಕ್ಕದಾಗಿವೆ, ಹಾಗಾಗಿ ಎಟಿಎಂ ಒಳಗಿನ ಕಂಪ್ಯೂಟರ್‌ಗಳನ್ನು ಮತ್ತೆ ರೀಕ್ಯಾಲಿಬರೇಟ್ ಮಾಡದೇ ಎಟಿಎಂಗಳಲ್ಲಿ ಐನೂರರ ಹೊಸ ನೋಟು ತುಂಬಲು ಸಾಧ್ಯವಿಲ್ಲ ಎಂದು ಬ್ಯಾಂಕ್‌ನವರೇ ಹೇಳುತ್ತಾರೆ. ಹಾಗಾಗಿ ನೋಟು ರದ್ದತಿಯಾಗಿ ಮೂರು ತಿಂಗಳು ಕಳೆದರೂ ಜನರು ಎರಡು ಸಾವಿರದ ನೋಟು ಹಿಡಿದುಕೊಂಡು ನೂರು ರೂಪಾಯಿಯ ತರಕಾರಿ ಕೊಳ್ಳಲು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಹ ದುಸ್ಥಿತಿ ಮುಂದುವರಿದಿದೆ. ಮುಂದಿನ ತಿಂಗಳಿನಿಂದ ಹೊಸ ಒಂದು ನೂರು ರೂಪಾಯಿಯ ನೋಟುಗಳೂ ಬರಲಿವೆ. ಇವುಗಳೂ ಈಗಿನ ಹಳೆಯ ನೂರರ ನೋಟುಗಳಿಗಿಂತ ಸೈಜಿನಲ್ಲಿ ಚಿಕ್ಕದಾಗಿವೆ ಎನ್ನಲಾಗುತ್ತಿದೆ. ಹಾಗಾಗಿ ಮತ್ತೆ ಎಲ್ಲಾ ಎಟಿಎಂಗಳನ್ನು ರೀಕ್ಯಾಲಿಬರೇಟ್ ಮಾಡಬೇಕಾಗುತ್ತದೆ. ಅಂದರೆ ಹಿಂದಿನ ಮೂರು ತಿಂಗಳಿನಲ್ಲಿ ಮೂರು ಬಾರಿ ದೇಶದ ಎಲ್ಲಾ ಎರಡೂಕಾಲು ಲಕ್ಷ ಎಟಿಎಂಗಳನ್ನು ಇಂಜಿನಿಯರ್‌ಗಳು ರೀಕ್ಯಾಲಿಬರೇಟ್ ಮಾಡುವುದರಲ್ಲಿಯೇ ವ್ಯರ್ಥ ಕಾಲ ಕಳೆಯಬೇಕಾಯಿತು. ಹಾಗೂ ಈ ಕೆಲಸವನ್ನು ಬ್ಯಾಂಕುಗಳು ಔಟ್-ಸೋರ್ಸ್ ಮಾಡಿದ್ದರಿಂದ ಬ್ಯಾಂಕುಗಳು ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಈ ಹೊರಗಿನ ಇಂಜಿನಿಯರ್‌ಗಳಿಗೆ ಕೊಡಬೇಕಾಯಿತು. ಮೊದಲೆಲ್ಲಾ ಎರಡೂಕಾಲು ಲಕ್ಷ ಎಟಿಎಂ ಗಳಲ್ಲಿ ಕೇವಲ ಹತ್ತು ಸಾವಿರ ಎಟಿಎಂಗಳು ಮಾತ್ರ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಕೊಡುತ್ತಿದ್ದರೆ ಉಳಿದ ಎರಡು ಲಕ್ಷಕ್ಕೂ ಮಿಕ್ಕಿದ ಎಟಿಎಂಗಳು ಕೇವಲ ಐನೂರು ಮತ್ತು ಒಂದು ನೂರು ರೂಪಾಯಿಯ ನೋಟುಗಳನ್ನು ಮಾತ್ರ ಕೊಡುತ್ತಿದ್ದವು. ಆದುದರಿಂದ ಮಾರುಕಟ್ಟೆಯಲ್ಲಿ ಐನೂರು ಮತ್ತು ನೂರು ರೂಪಾಯಿ ನೋಟುಗಳಿಗೆ ಎಂದೂ ಕೊರತೆ ಬಂದಿರಲಿಲ್ಲ. ಆದರೆ ಈಗ ಪರೀಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ.
ನೋಟು ಅಮಾನ್ಯಗೊಂಡಾಗ ಒಟ್ಟು 15 ಲಕ್ಷ ಕೋಟಿ ಮೌಲ್ಯದ ಹಣ ಚಲಾವಣೆಯಿಂದ ಹೊರ ಹೋಯಿತು. ಅದರ ಜಾಗದಲ್ಲಿ ಅಷ್ಟೇ ಮೌಲ್ಯದ ಹೊಸ ನೋಟುಗಳು ಚಲಾವಣೆಗೆ ಬಂದಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಆದರೂ ಈಗಲೂ ಐನೂರರ ನೋಟುಗಳ ಕೊರತೆ ಯಾಕೆ ಇದೆ? ಕಾರಣ ಇಷ್ಟೇ, ನೋಟು ರದ್ದತಿಯಾದಾಗ ಚಲಾವಣೆಯಿಂದ ಹೊರ ಹೋದ 15 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಲ್ಲಿ ಐನೂರರ ಪಾಲು ಇದ್ದಿದ್ದು ಹನ್ನೆರಡು ಲಕ್ಷ ಕೋಟಿ ಮೌಲ್ಯದ್ದು ಹಾಗೂ ಒಂದು ಸಾವಿರದ್ದು ಇದ್ದಿದ್ದು ಕೇವಲ ಮೂರು ಲಕ್ಷ ಕೋಟಿ ಮೌಲ್ಯದ್ದು. ಆದರೆ ಹೊಸ ನೋಟು ಚಲಾವಣೆಗೆ ತರುವಾಗ ಅದೇ ಹನ್ನೆರಡು ಲಕ್ಷ ಕೋಟಿ ಮೌಲ್ಯದ ಐನೂರರ ನೋಟು ತರುವ ಬದಲು ಕೇವಲ ನಾಲ್ಕು ಲಕ್ಷ ಕೋಟಿ ಮೌಲ್ಯದ ಹೊಸ ಐನೂರರ ನೋಟುಗಳನ್ನು ಮಾತ್ರ ತಂದಿದ್ದು, ಹಾಗೂ ಉಳಿದ ಹನ್ನೊಂದು ಲಕ್ಷ ಕೋಟಿ ಮೌಲ್ಯದ ಹೊಸ ನೋಟು ಕೇವಲ ಎರಡು ಸಾವಿರ ಮುಖಬೆಲೆಯದ್ದೇ ಚಲಾವಣೆಗೆ ತರಲಾಗಿದೆ. ಈ ರೀತಿ ಮೂರು ಹಳೆಯ ಐನೂರರ ನೋಟಿಗೆ ಬದಲಾಗಿ ಕೇವಲ ಒಂದು ಹೊಸ ಐನೂರರ ನೋಟು ಚಲಾವಣೆಗೆ ಬಂದಂತಾಯಿತು. ಹಾಗಾಗಿ ಐನೂರರ ಕೊರತೆ ಉಂಟಾಗಿದೆ.
ಇನ್ನೊಂದು ವಿಚಿತ್ರ ಕಾರಣ ಎಂದರೆ ಈ ಐನೂರರ ಹೊಸ ನೋಟು ನಮ್ಮ ಕರ್ನಾಟಕದ ಮೈಸೂರಿನ ಸೆಕ್ಯುರಿಟಿ ಪ್ರೆಸ್‌ನಲ್ಲಿಯೇ ಮುದ್ರಣ ಆಗುತ್ತಿದ್ದರೂ ಅದರ ಚಲಾವಣೆ ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಹೆಚ್ಚು ಮಾಡಲಾಗಿದೆ. ಕಾರಣ ಈ ರಾಜ್ಯಗಳಲ್ಲಿ ಈಗ ಚುನಾವಣೆ ನಡೆಯುತ್ತಿದ್ದು ಅಲ್ಲಿ ನೋಟು ರದ್ದತಿಯಿಂದ ಉಂಟಾದ ಭೀಕರ ಬವಣೆ ಚುನಾವಣೆ ಸಮಯದಲ್ಲಿ ಮತದಾರರಿಗೆ ನೆನಪು ಬರಬಾರದು ಹಾಗೂ ಅವರೆಲ್ಲಾ ತಮ್ಮ ಪಕ್ಷಕ್ಕೇ ಓಟು ಕೊಡಬೇಕು ಎಂದು ಎಲ್ಲಾ ಐನೂರರ ಹೊಸ ನೋಟುಗಳನ್ನು ಆ ರಾಜ್ಯಗಳಿಗೇ ಕೇಂದ್ರ ಸರಕಾರ ರವಾನಿಸಿದೆಯೆಂದು ಸುದ್ದಿಯಿದೆ.
ಒಟ್ಟಾರೆ ನೋಟು ರದ್ದತಿಯ ದುಷ್ಪರಿಣಾಮ ನಾವು ಇನ್ನೂ ಎಷ್ಟು ಕಾಲ ಅನುಭವಿಸಬೇಕೋ ಏನೋ !
 

share
-ಆರ್. ಬಿ. ಶೇಣವ, ಮಂಗಳೂರು
-ಆರ್. ಬಿ. ಶೇಣವ, ಮಂಗಳೂರು
Next Story
X