ಜಯಲಲಿತಾಗೆ ವಿಷವಿಕ್ಕಲಾಗಿತ್ತು : ಪಕ್ಷದ ನಾಯಕನಿಂದ ಆಘಾತಕಾರಿ ಹೇಳಿಕೆ

ಚೆನ್ನೈ,ಫೆ.6 : ತಮಿಳುನಾಡಿನಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾದ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಗದ್ದುಗೆಯೇರಲು ಸಿದ್ಧತೆ ನಡೆಸಿರುವಂತೆಯೇ ನಾಟಕೀಯ ಬೆಳವಣಿಗೆಯೊಂದರಲ್ಲಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದಪಿ ಎಚ್ ಪಾಂಡ್ಯನ್ ಅವರು ತಮ್ಮ ಪುತ್ರ ಮಾಜಿ ಸಂಸದ ಮನೋಜ್ ಪಾಂಡ್ಯನ್ ಜತೆ ಪತ್ರಿಕಾಗೋಷ್ಠಿಯೊಂದನ್ನು ಮಂಗಳವಾರ ನಡೆಸಿಜಯಲಲಿತಾ ಅವರ ಸಾವು ಸಹಜವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಕೂಡ ಆಗಿರುವಪಾಂಡ್ಯನ್ ಅವರು ಆಪಾದಿಸಿದಂತೆ ಜಯಲಲಿತಾ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ‘‘ಪೊಯೆಸ್ ಗಾರ್ಡನ್ ನಿವಾಸದಲ್ಲಿ ಅವರು ಯಾರೊಂದಿಗೋವಾಗ್ವಾದ ನಡೆಸಿದ್ದರು.ಜಯಲಲಿತಾ ಅವರಿಗೆ ವಿಷ ನೀಡಲಾಗಿದೆ. ಇದು ನಿಜ. ಯಾವುದೇ ಎಐಎಡಿಎಂಕೆ ಸದಸ್ಯಕೂಡ ಶಶಿಕಲಾ ಅವರನ್ನು ಸ್ವೀಕರಿಸಿಲ್ಲ,’’ ಎಂದು ಮನೋಜ್ ಪಾಂಡ್ಯನ್ ಹೇಳಿದರು.
ಜಯಲಲಿತಾ ಅವರುಸೆಪ್ಟೆಂಬರ್ 22ರಂದು ಜಗಳವೊಂದರಲ್ಲಿ ಗಾಯಗೊಂಡು ನಂತರ ಶಂಕೆ ಬಾರದಂತೆ ಮಾಡಲು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು ಎಂಬ ಮಾಧ್ಯಮ ವರದಿಗಳನ್ನು ನಾನು ಓದಿದ್ದೆ ಎಂದು ಪಾಂಡ್ಯನ್ ಹೇಳಿದರು. ‘‘ಆಕೆ ಖಿನ್ನರಾಗಿದ್ದು ಹಾಗೂ ತಮ್ಮನ್ನು ಯಾರೋ ದೂಡಿದ್ದರಿಂದ ಕುಸಿದು ಬಿದ್ದಿದ್ದರು. ನಂತರ ಯಾರೂ ಸಂಶಯ ಪಡಬಾರದೆಂದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು,’’ ಎಂದು ಪಿ ಎಚ್ ಪಾಂಡ್ಯನ್ ಹೇಳಿದರು.
ಜಯಲಲಿತಾ ಸಾವಿನ ತನಿಖೆನಡೆಸಬೇಕೆಂದು ಆಗ್ರಹಿಸಿದ ಪಾಂಡ್ಯನ್, ಹಲವು ಬಾರಿ ಜಯಲಲಿತಾ ತನ್ನೊಡನೆ ಮಾತನಾಡಿ ‘‘ಈ ಜನರು ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’’ ಎಂದು ಆತಂಕ ತೋಡಿಕೊಂಡಿದ್ದರು ಎಂದು ಪಾಂಡ್ಯನ್ಹೇಳಿದ್ದಾರೆ.
ಶಶಿಕಲಾ ಅವರಿಗೆ ಮುಖ್ಯಮಂತ್ರಿಯಾಗಲು ಏನು ಅವಸರ, ಎಂದುಜಯಲಲಿತಾ ಹಾಗೂ ಎಂ ಜಿ ರಾಮಚಂದ್ರನ್‌ಅವರ ಜತೆಗೂ ಕೆಲಸ ಮಾಡಿದ್ದ ಪಾಂಡ್ಯನ್ಕೇಳಿದರು.
‘‘ಆಕೆಗೆಕೌನ್ಸಿಲರ್ ಹುದ್ದೆ ಕೂಡ ನೀಡಲಾಗಿರಲಿಲ್ಲ. ಅಮ್ಮ ಅವರ ರಾಜಕೀಯ ಉತ್ತರಾಧಿಕಾರಿ ಅವರು ಹೇಗೆ ಆಗಲು ಸಾಧ್ಯ?’’ ಎಂದವರು ಪ್ರಶ್ನಿಸಿದ್ದಾರೆ.
ಜಯಲಲಿತಾ ಮೃತಪಟ್ಟಾಗ ಶಶಿಕಲಾ ಅಥವಾ ಆಕೆಯ ಕುಟುಂಬ ಸದಸ್ಯರಿಗೆ ಯಾವದುಃಖವೂ ಇರಲಿಲ್ಲ ಎಂದೂ ಅವರು ಆರೋಪಿಸಿದರು.
ಆದರೆ ಪಾಂಡ್ಯನ್ ಆರೋಪವನ್ನು ಎಐಎಡಿಎಂಕೆ ನಿರಾಕರಿಸಿದ್ದುಅವರನ್ನು 2015ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದ್ದು ಅವರೀಗ ಅವಕಾಶವಾದಿಯಾಗುತ್ತಿದ್ದಾರೆ ಎಂದು ಹೇಳಿದೆ.
‘‘ಅವರು ಪಕ್ಷವನ್ನು ಒಡೆಯಲು ಯತ್ನಿಸುತ್ತಿದ್ದಾರೆ.ಸಹಾಯಕ್ಕಾಗಿ ಅವರು ಚಿನ್ನಮ್ಮರಲ್ಲಿ ಬೇಡುತ್ತಿರುವುದನ್ನು ನಾನು ನೋಡಿದ್ದೇನೆ. ಅವರೆಲ್ಲಾ ಸ್ವಾರ್ಥಿಗಳು,’’ ಎಂದು ಪಕ್ಷದ ವಕ್ತಾರೆ ಸಿ ಆರ್ ಸರಸ್ವತಿ ಅಭಿಪ್ರಾಯ ಪಟ್ಟಿದ್ದಾರೆ.







