ನಾರ್ವೆಯ ಮಾಜಿ ಪ್ರಧಾನಿಯನ್ನೇ ವಶಕ್ಕೆ ಪಡೆದ ಅಮೇರಿಕ ವಿಮಾನ ನಿಲ್ದಾಣ ಅಧಿಕಾರಿಗಳು

ವಾಷಿಂಗ್ಟನ್ , ಫೆ.7: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಳು ಮುಸ್ಲಿಂ ದೇಶಗಳ ಜನರನ್ನು ಅಮೆರಿಕಾ ಪ್ರವೇಶಿಸದಂತೆ ತಡೆ ಹೇರಿ ನೀಡಿದ ಆದೇಶವು ಯುರೋಪಿಯನ್ ಯೂನಿಯನ್ ನ ಮಾಜಿ ನಾಯಕರು, ರಾಜತಾಂತ್ರಿಕರು ಹಾಗೂ ಪ್ರಮುಖ ಮಾನವ ಹಕ್ಕು ಸಂಘಟನೆಗಳ ಅಧ್ಯಕ್ಷರಿಗೆ ಅನ್ವಯವಾಗುವುದಿಲ್ಲವೆಂದು ಹೇಳಲಾಗಿತ್ತು.
ಸದ್ಯ ಈ ನಿಷೇಧಕ್ಕೆ ಸಿಯಾಟೆಲ್ ಫೆಡರಲ್ ನ್ಯಾಯಾಧೀಶರೊಬ್ಬರು ತಡೆ ಹೇರಿರುವರಾದರೂ, ಟ್ರಂಪ್ ಆದೇಶ ಜಾರಿಯಲ್ಲಿರುವ ಸಂದರ್ಭ, ಅಂದರೆ ಜನವರಿ 31ರಂದುವಾಷಿಂಗ್ಟನ್ ನಗರದ ಡಲ್ಲೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಿಸಿದ ನಾರ್ವೆ ದೇಶದ ಮಾಜಿ ಪ್ರಧಾನಿ ಕ್ಜೆಲ್‌ಲ್ ಮ್ಯಾಗ್ನೆ ಬೊಂಡೆವಿಕ್ ಅವರನ್ನು ಎಮಿಗ್ರೇಶನ್ ಅಧಿಕಾರಿಗಳು ತಡೆ ಹಿಡಿದು ವಶಕ್ಕೆ ಪಡೆದಿದ್ದರು. ಕಾರಣ ಅವರ ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಜತೆಗಿದ್ದಿದ್ದು ಇರಾನ್ ದೇಶದ ವೀಸಾವಾಗಿತ್ತು. ಇಂತಹ ವೀಸಾ ಹೊಂದಿದವರಿಗೆ ಪ್ರಯಾಣ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಅವರಿಗೆ ತಿಳಿಯಪಡಿಸಿದರು.
ತಾನು ಟೆಹ್ರಾನ್ ನಗರದಲ್ಲಿ ಭಯೋತ್ಪಾದನಾ ವಿರೋಧಿ ಸಮ್ಮೇಳನವೊಂದರಲ್ಲಿ ಭಾಷಣ ನೀಡಲು ಹೋಗಿದ್ದೆನೆಂದು ಹೇಳಿದಾಗಲಾದರೂ ತನಗೆ ಹೋಗಬಿಡುವರು ಎಂದು ಬೊಂಡೆವಿಕೆ ಅಂದುಕೊಂಡಿದ್ದರೆ ಹಾಗಾಗಲಿಲ್ಲ. ಅವರನ್ನು ಮತ್ತೊಂದು ಗಂಟೆಯ ಕಾಲ ಪ್ರಶ್ನಿಸಲಾಗಿತ್ತು. ‘‘ನಾನು ಅಮೆರಿಕಾಕ್ಕೆ ಬೆದರಿಕೆಯೊಡ್ಡುತ್ತಿದ್ದೇನೆಂದು ಅವರು ತಿಳಿದುಕೊಂಡಿದ್ದಾರೆಯೇ ?’’ ಎಂದು ಅವರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಮಧ್ಯಪೂರ್ವ ಹಾಗೂ ಆಫ್ರಿಕನ್ ದೇಶದ ಹಲವು ವಲಸಿಗರೊಂದಿಗೆ ತನ್ನನ್ನೂ ಬಹಳ ಕಾಲ ವಿಚಾರಣೆ ನಡೆಸಿ ಕೊನೆಗೂ ತನ್ನನ್ನು ಬಿಟ್ಟು ಬಿಡಲಾಯಿತು ಎಂದು ಬೊಂಡೆವಿಕ್ ಹೇಳಿದ್ದಾರೆ. ಇಂತಹ ಕ್ರಮಮಾನವರ ಘನತೆಗೆ ಕುಂದುಂಟು ಮಾಡುವುದು ಎಂದು ಅವರು ಅಭಿಪ್ರಾಐ ಪಟ್ಟಿದ್ದಾರೆ. ಬೊಂಡೆವಿಕ್ ಅವರು ಮಾನವ ಹಕ್ಕುಗಳ ಸಂಘಟನೆ ಒಸ್ಲೊ ಸೆಂಟರ್ ಇದರ ಅಧ್ಯಕ್ಷರಾಗಿದ್ದಾರೆ.







