ಬಿಜೆಪಿ ಮಾತು ತಪ್ಪಿದೆ: ಸಿ.ಕೆ. ಜಾನು

ಕಲ್ಪಟ್ಟ,ಫೆ. 7: ಜನಾಧಿಪತ್ಯ ರಾಷ್ಟ್ರೀಯ ಸಭಾ( ಪ್ರಜಾಪ್ರಭುತ್ವವಾದಿ ರಾಜಕೀಯ ಸಭೆ) ಎನ್‌ಡಿಎಯಲ್ಲಿ ಸೇರಿ ಸ್ಪರ್ಧಿಸಿದ್ದ ಸಮಯದಲ್ಲಿ ಕೊಟ್ಟ ಮಾತುಗಳನ್ನು ಬಿಜೆಪಿ ಪಾಲಿಸಿಲ್ಲ ಎಂದು ಆದಿವಾಸಿ ಗೋತ್ರ ಮಹಾಸಭಾ ಅಧ್ಯಕ್ಷೆ ಸಿ.ಕೆ.ಜಾನು ಹೇಳಿದ್ದಾರೆ. ಕೊಟ್ಟ ಮಾತನ್ನು ಪಾಲಿಸುವುದು ಅವರ ಹೊಣೆಯಾಗಿದೆ. ಬಿಜೆಪಿ ಹೇಳಿದ ಮಾತು ಪಾಲಿಸದೆ ವಂಚಿಸಿದರೆ ಅದರ ಕೆಟ್ಟ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ. ವಾಗ್ದಾನ ನೀಡಿದವರು ಅದು ಜಾರಿಗೆ ತರದಿದ್ದರೆ ತಾನು ಮರುಪ್ರಶ್ನೆ ಕೇಳುವೆ ಎಂದು ಜಾನುಪತ್ರಕರ್ತರಿಗೆ ತಿಳಿಸಿದ್ದಾರೆ.
ಜನಾಧಿಪತ್ಯ ರಾಷ್ಟ್ರೀಯ ಸಭಾದ ಅಜೆಂಡಾ ಬಿಜೆಪಿಗಿಂತ ಭಿನ್ನವಾಗಿದೆ. ಪಾರ್ಟಿ ಎನ್ನುವ ನೆಲೆಯಲ್ಲಿ, ನಿಲುವುಗಳಲ್ಲಿ ರಾಜಕೀಯ ಚಿಂತನೆಗಳಲ್ಲಿ ನಮಗೆ ನಮ್ಮದೇ ಆದ ದೃಷ್ಟಿಕೋನಗಳಿವೆ. ಎನ್‌ಡಿಎಯ ಭಾಗವಾಗಿ ನಾವು ಒಟ್ಟಿಗೆ ಸಾಗುತ್ತಿದ್ದೇವೆ ಅಷ್ಟೇ.
ಭೂಸಮರ(ಜಮೀನಿಗಾಗಿ ಹೋರಾಟ) ಗೋತ್ರಮಹಾಸಭಾ ಒಂಟಿಯಾಗಿ ನಡೆಸುತ್ತಿದೆ. ಅದು ಇನ್ನು ಕೂಡಾ ಮುಂದುವರಿಯಲಿದೆ. ನಮ್ಮೊಂದಿಗೆ ನೆರವಾಗಲು ಸಿದ್ಧರಿರುವವರನ್ನು ನಮಗೆ ಆಗುವುದಾದರೆ ಈ ಹೋರಾಟದಲ್ಲಿ ಸೇರಿಸಿಕೊಳ್ಳುತ್ತೇವೆ. ಬಿಜೆಪಿ ಭೂಸಮರವನ್ನು ವಹಿಸಿಕೊಂಡಿರುವುದು ನನಗೆ ಗೊತ್ತಿಲ್ಲ. ನಮ್ಮೊಡನೆ ಆ ಬಗ್ಗೆ ಅದು ಈವರೆಗೂ ಚರ್ಚಿಸಿಲ್ಲ. ಈ ಹಿಂದೆಯೂ ಬಿಜೆಪಿ ಆದಿವಾಸಿ ಹೋರಾಟವನ್ನು ವಹಿಸಿಕೊಂಡದ್ದಿಲ್ಲ ಎಂದು ಅವರು ಹೇಳಿರುವುದಾಗಿ ವರದಿತಿಳಿಸಿದೆ.







