ಫೈಝಲ್ ಕೊಲೆ: ಇಬ್ಬರು ಆರೆಸ್ಸೆಸಿಗರ ಬಂಧನ
.png)
ತಿರೂರಂಙಾಡಿ, ಫೆ.7: ಕೊಡಿಂಞಿ ಫಾರೂಕ್ ನಗರದ ಪುಲ್ಲೂಣಿಯ ಫೈಝಲ್ ಕೊಲೆ ಪ್ರಕರಣದ ಮುಖ್ಯಾರೋಪಿ ಮತ್ತು ಆತನ ಸಹಾಯಕನ ಸಹಿತ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ತಿರೂರ್ ಅಲತ್ತಿಯೂರ್ ಬಿಬಿನ್(26), ಆತನ ಸಹಾಯಕ ತಿರೂರ್ ಪೊಯಿಲಶ್ಶೇರಿ ರತೀಶ್(27) ಎಂಬಿಬ್ಬರನ್ನು ಮಲಪ್ಪುರಂ ಕ್ರೈಂಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಇವರು ಅಡಗಿ ಕುಳಿತಿದ್ದ ಮೈಸೂರು ಸಮೀಪದ ಒಂದು ಕೃಷಿಫಾರ್ಮ್‌ನ ರಹಸ್ಯ ಸ್ಥಳದಿಂದ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಬಿಬಿನ್ ಅಡಗಿ ಕುಳಿತುಕೊಳ್ಳಲು ನೆರವಾದ ಆರೋಪದಲ್ಲಿ ರತೀಶ್‌ನನ್ನು ಬಂಧಿಸಲಾಗಿದೆ. ಫೈಝಲ್ ಕೊಲೆ ನಡೆಸಿದ ಬಳಿಕ ದುಬೈಗೆ ಪರಾರಿಯಾಗಿದ್ದ ಬಿಬಿನ್ ಅಲ್ಲಿಂದ ಮರಳಿ ಬಂದು ಒಂದು ತಿಂಗಳಿಂದ ವಯನಾಡ್ ಮತ್ತು ಕರ್ನಾಟಕಗಳಲ್ಲಿ ಅಡಗಿ ಕುಳಿತಿದ್ದ. ಫೆರ್ಗೂರಿನ ಫಾರ್ಮ್ ಹೌಸ್‌ನಲ್ಲಿ ಅಡಗಿದ್ದ ಬಿಬಿನ್ ತನ್ನ ಮೊಬೈಲ್‌ನ್ನು ಉಪಯೋಗಿಸುತ್ತಿರಲಿಲ್ಲ. ಪೊಲೀಸರುಸೈಬರ್ ಸೆಲ್‌ನ ನೆರವಿನಲ್ಲಿ ಅರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಈತನ ಪಾಸ್‌ಪೋರ್ಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಬಿನ್‌ಗೆ ಇರಲು ಜಾಗಕೊಟ್ಟು ಕೆಲಸ ತೆಗೆಸಿಕೊಟ್ಟ ಇತರ ಹಲವರನ್ನು ಇನ್ನಷ್ಟೆ ಬಂಧಿಸಬೇಕಾಗಿದೆ ಎಂದುಪೊಲೀಸರು ತಿಳಿಸಿದ್ದಾರೆ. ಫೈಝಲ್ ಕೊಲೆ ಪ್ರಕರಣದಲ್ಲಿ ಒಟ್ಟು ಹದಿನಾಲ್ಕು ಮಂದಿಯನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ. ಕ್ರೈಂಬ್ರಾಂಚ್ ಡಿವೈಎಸ್ಪಿಸಿ.ಕೆ. ಬಾಬು, ಪೆರಿಂದಲ್‌ಮಣ್ಣ ಡಿವೈಎಸ್ಪಿ ಎಂ.ಪಿ. ಮೋಹನ್ ಚಂದ್ರನ್ ನೇತೃತ್ವದಲ್ಲಿ ಬಿಬಿನ್, ರತೀಶ್ ಬಂಧನ ಕಾರ್ಯಾಚರಣೆ ನಡೆದಿದೆ ಎಂದು ವರದಿ ತಿಳಿಸಿದೆ.





