ಮಿಶ್ರಾನ ಸ್ಥಾನದಲ್ಲಿ ಕುಲ್‌ದೀಪ್ ಯಾದವ್‌ಗೆ ಮಣೆ
ಏಕೈಕ ಟೆಸ್ಟ್

ಹೊಸದಿಲ್ಲಿ, ಫೆ.7: ಹೈದಾರಾಬಾದ್‌ನಲ್ಲಿ ಗುರುವಾರ ಬಾಂಗ್ಲಾ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಅಮಿತ್ ಮಿಶ್ರಾರ ಸ್ಥಾನದಲ್ಲಿ ಕುಲ್‌ದೀಪ್ ಯಾದವ್‌ರಿಗೆ ಮಣೆ ಹಾಕಲಾಗಿದೆ.ಕಳೆದ ವಾರ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಅಮಿತ್ ಮಿಶ್ರಾ ಅವರು ತನ್ನ ಮೊಣಕೈಗೆ ಗಾಯ ಮಾಡಿಕೊಂಡಿದ್ದ ಕಾರಣ ಬಾಂಗ್ಲಾ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಮಿಶ್ರಾರವರ ಬದಲು ಕುಲ್‌ದೀಪ್ ಯಾದವ್‌ರಿಗೆ ಭಾರತೀಯ ಉನ್ನತಮಟ್ಟದ ಆಯ್ಕೆ ಸಮಿತಿಯು ಮಣೆ ಹಾಕಿದೆ.ಮಿಶ್ರಾರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹಾಗೂ ಬೇಕಾದ ವೈದ್ಯಕೀಯ ಸೌಲಭ್ಯ ಪಡೆಯಲು ಸಲಹೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
Next Story





