ಮುಸ್ಲಿಂ ಸಮುದಾಯದ ಬಡ ಹೆಣ್ಣು ಮಕ್ಕಳಿಗೆ ಸಾಮೂಹಿಕ ವಿವಾಹ

ಸುಳ್ಯ, ಫೆ. 17: ಮುಸ್ಲಿಂ ಸಮುದಾಯದ ಏಳು ಬಡ ಹೆಣ್ಣು ಮಕ್ಕಳಿಗೆ ಸಾಮೂಹಿಕ ವಿವಾಹವು ಹಳೆಗೇಟ್ ಹಾರಿಸ್ ಕೋಟೇಜ್ ಗುಂಡ್ಯಡ್ಕದಲ್ಲಿ ನಡೆಯಿತು. ಸುಳ್ಯದ ಸೀ ಫುಡ್ ನ ಜಿ.ಇಬ್ರಾಹೀಂ ಅವರು ಈ ಸಾಮೂಹಿಕ ವಿವಾಹವನ್ನು ತನ್ನ ಸ್ವಂತ ಖರ್ಚಿನಲ್ಲಿ ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ನಾವೂರು ಸಅದಿ ತಂಙಳ್ ಅಸ್ಸಯ್ಯದ್ ಕುಂಞಿಕೋಯ ಉದ್ಘಾಟಿಸಿದರು. ಚೇರ್ ಮೆನ್ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ನ.ಪಂ. ಸದಸ್ಯರುಗಳಾದ ಎನ್.ಎ. ರಾಮಚಂದ್ರ, ಮುಸ್ತಫಾ ಸುಳ್ಯ, ಕೆ.ಎಸ್.ಉಮರ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ನ.ಪಂ.ಮಾಜಿ ಅಧ್ಯಕ್ಷ ಶಂಸುದ್ದೀನ್, ಜಮೀಯತುಲ್ ಫಲಹ್ ಸುಳ್ಯ ಘಟಕದ ಮಾಜಿ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ, ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಕೋಶಾಧಿಕಾರಿ ಕೆ.ಪಿ.ಸಾದಿಕ್ ಹಾಜಿ ಕುಂಬ್ರ, ಕಿಲ್ಲೂರು ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಮ್.ಎ. ಖಾಸಿಂ ಮಲ್ಲಿಗೆ ಮನೆ, ರಶೀದ್ ಕಮ್ಮಾಡಿ, ಮೂಸ ಕುಂಞಿ ಪೈಂಬೆಚ್ಚಾಲ್ ಮೊದಲಾದವರು ಉಪಸ್ಥಿತರಿದ್ದರು. ಬಿ.ಎಸ್. ಶರೀಫ್ ಸ್ವಾಗತಿಸಿ, ಹಸೈನಾರ್ ಸುದ್ದಿ ಮತ್ತು ಕೆ.ಎಸ್. ಶರೀಫ್ ಪಟ್ರಕೋಡಿ ವಂದಿಸಿದರು.





