ಫೇಸ್ ಬುಕ್ ಸ್ಥಾಪಕ ಮಾರ್ಕ್ ರನ್ನೇ 'ಅನ್ ಲೈಕ್' ಮಾಡಿದರೆ ಕಂಪೆನಿಯ ಹೂಡಿಕೆದಾರರು ?

ಲಾಸ್ ಏಂಜಲಿಸ್, ಫೆ. 7: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ನಿರ್ದೇಶಕರ ಮಂಡಳಿಯಿಂದ ಮಾರ್ಕ್ ಝುಕರ್‌ಬರ್ಗ್‌ರನ್ನು ಹೊರಹಾಕುವ ಪ್ರಸ್ತಾಪವೊಂದನ್ನು ಕಂಪೆನಿಯ ಕೆಲವು ಶೇರುದಾರರು ಮುಂದಿಟ್ಟಿದ್ದಾರೆ.
ಫೇಸ್‌ಬುಕ್‌ನಲ್ಲಿ ಶೇರು ಹೊಂದಿರುವ ಕಾರ್ಪೊರೇಟ್ ನಿಗಾ ಗುಂಪು ‘ಸಮ್‌ಆಫ್‌ಅಸ್’ನ ಸದಸ್ಯರು ಈ ಪ್ರಸ್ತಾಪವನ್ನು ಮಂಡಿಸಿದ್ದಾರೆ. ಝುಕರ್‌ಬರ್ಗ್‌ರನ್ನು ಸಿಇಒ ಹುದ್ದೆಯಿಂದ ತೆಗೆಯುವುದು ಅವರ ಉದ್ದೇಶವಾಗಿದೆ.
ನಿರ್ದೇಶಕರ ಮಂಡಳಿಯ ಅಧ್ಯಕ್ಷ ಹುದ್ದೆಯಿಂದ ಝುಕರ್‌ಬರ್ಗ್‌ರನ್ನು ತೆರವುಗೊಳಿಸುವ ಅರ್ಜಿಯನ್ನು ಸುಮಾರು 3,33,000 ಮಂದಿ ಸಲ್ಲಿಸಿದ್ದಾರೆ ಎಂದು ‘ವೆಂಚರ್‌ಬೀಟ್’ನ ವರದಿಯೊಂದು ತಿಳಿಸಿದೆ. ಆದಾಗ್ಯೂ, 3,33,000 ಮಂದಿಯ ಪೈಕಿ ಕೇವಲ 1,500 ಮಂದಿ ಮಾತ್ರ ನೈಜ ಶೇರುದಾರರು ಎಂದಿದೆ.
ಕಾರ್ಪೊರೇಟ್ ಆಡಳಿತವನ್ನು ಸುಧಾರಿಸುವ ‘ಸ್ವತಂತ್ರ ಅಧ್ಯಕ್ಷ’ರೊಬ್ಬರನ್ನು ನೇಮಿಸಬೇಕು ಎಂದು ಶೇರುದಾರರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
Next Story





