ಮರಳು ಶೇಖರಿಸುತ್ತಿದ್ದ ಜೆಸಿಬಿ ವಶ
ಮಂಗಳೂರು, ಫೆ.7: ನಗರ ಹೊರವಲಯದ ಕಣ್ಣೂರಿನ ನೇತ್ರಾವತಿ ನದಿ ತೀರದಲ್ಲಿ ಜೆಸಿಬಿ ಮೂಲಕ ಮರಳು ರಾಶಿ ಹಾಕುತ್ತಿದ್ದ ಜೆಸಿಬಿಯೊಂದನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾಳಿ ನಡೆಸಿದಾಗ ಮರಳು ರಾಶಿ ಹಾಕುತ್ತಿದ್ದುದು ಕಂಡು ಬಂತು. ಪರವಾನಗಿಯ ಬಗ್ಗೆ ವಿಚಾರಿಸಿದಾಗ ಅವರಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ.
ಜೆಸಿಬಿಯ ಚಾಲಕನನ್ನು ಇನಾಮನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಅದರ ಮಾಲಕ ಹಾಗು ಮರಳು ವ್ಯಾಪಾರಿ ರಿಯಾಝ್ ಎಂದು ಅನ್ಸಾರಿ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ರವಿ ನಾಯ್ಕೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story





