ರೆಸಿಡೆನ್ಸಿ ನಿವಾಸಿಗಳ ಜಗಳ: ದೂರು- ಪ್ರತಿದೂರು ದಾಖಲು
ಮಂಗಳೂರು, ಫೆ. 7: ನಗರದ ಕೊಡಿಯಾಲ್‌ಬೈಲ್ ಭಗವತಿ ನಗರದ ಬಳಿಯಿರುವ ರೆಸಿಡೆನ್ಸಿಯೊಂದರ ನಿವಾಸಿಗಳಿಬ್ಬರ ನಡುವೆ ಸೋಮವಾರ ರಾತ್ರಿ ಜಗಳವಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿಕೊಳ್ಳಲಾಗಿದೆ.
ಈ ರೆಸಿಡೆನ್ಸಿಯ ನಿವಾಸಿಯಾಗಿರುವ ನಂದಿನಿ ವಿ. ಪ್ರಭು ನೀಡಿದ ದೂರಿನಲ್ಲಿ ದೀಪಕ್ ತನ್ನ ಜತೆ ಗಲಾಟೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೀಪಕ್ ನೀಡಿದ ದೂರಿನಲ್ಲಿ ಚಪ್ಪಲಿಯಿಡುವ ವಿಷಯಕ್ಕೆ ನಂದಿನಿ ತನ್ನ ಜೊತೆ ಜಗಳಕ್ಕಿಳಿದಿದ್ದು, ಬಳಿಕ ತನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ವಿದೇಶಿದಲ್ಲಿರುವ ಗಂಡ ಬಂದ ಬಳಿಕ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
Next Story





