ಸಮುದ್ರಕ್ಕೆ ಬಿದ್ದು ಮೃತ್ಯು
ಬೈಂದೂರು, ಫೆ.7: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಆಯ ತಪ್ಪಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಫೆ.6ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕಿರಿಮಂಜೇಶ್ವರ ಗ್ರಾಮ ಕೊಡೇರಿಯ ರಾಮಕೃಷ್ಣ ಎಂಬವರ ಮಗ ಲೋಕೆಶ್ ಎಂದು ಗುರುತಿಸಲಾಗಿದೆ. ಇವರು ಗ್ರಾಮದೇವತೆ ಎಂಬ ಹೆಸರಿನ ಮಾಟುಬಲೆ ದೋಣಿ ಜೋಡಿಯಲ್ಲಿ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದು, ಅಲ್ಲಿ ದೋಣಿ ದೊಡ್ಡ ಅಲೆಗೆ ಸಿಲುಕಿದ ಪರಿಣಾಮ ಇವರು ಆಯತಪ್ಪಿಸಮುದ್ರಕ್ಕೆ ಬಿದ್ದಿದ್ದರು. ದೋಣಿಯಲ್ಲಿದ್ದ ಉಳಿದವರು ಅವರನ್ನು ಮೇಲಕ್ಕೆ ಎತ್ತಿ ದಡಕ್ಕೆ ಕರೆತಂದು ರಾತ್ರಿ 8:50ಕ್ಕೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





