ರಾಜ್ಯಮಟ್ಟಕ್ಕೆ ಮೇಧಾಶ್ರೀ

ಚಿಕ್ಕಮಗಳೂರು, ಫೆ.7: ನಗರದ ಸಾಯಿ ಏಂಜೆಲ್ಸ್ ಶಾಲೆಯ 7ನೆಯ ತರಗತಿ ವಿದ್ಯಾರ್ಥಿ ಮೇಧಾಶ್ರೀ ಎಂ.ಜೋಯಿಸ್ ಬೆಂಗಳೂರಿನ ಬಾಲ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗವಹಿಸುವಳು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಆಕೆ ಆಯ್ಕೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಸ್ಪರ್ಧೆ ಏರ್ಪಡಿಸಿದೆ. ಈ ವಿದ್ಯಾರ್ಥಿನಿ ಮಂಡ್ಯದ ಪ್ರಗತಿಪರ ವೇದಿಕೆ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲೂ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿ ಕಲಾರತ್ನ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.
ಶಂಕರ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುವ ಚಾಂಟ್ ಇಂಡಿಯಾ ಸಂಗೀತದ ರಿಯಾಲಿಟಿ ಶೋನಲ್ಲಿ ಸೆಮಿ ಫೈನಲ್ ತಲುಪಿದ್ದು, ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಿಗ್ಗೆ 10.30ಕ್ಕೆ ಪ್ರಸಾರವಾಗುತ್ತದೆ. ಮೇಧಾಶ್ರೀ ಬಿ.ಎಸ್.ಎನ್.ಎಲ್. ಉದ್ಯೋಗಿ ಮುಕುಂದ ಜೋಯಿಸ್ ಮತ್ತು ಸವಿತಾ ದಂಪತಿ ಪುತ್ರಿ. ಭಾರತಿ ಕಲಾಪೀಠ ಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ.
Next Story





